ನಾಪೋಕ್ಲು, ಜ. ೨೪: ಸುಮಾರು ರೂ. ೮೦ ಲಕ್ಷ ವೆಚ್ಚದಲ್ಲಿ ನಿರ್ಮಿಸ ಲಾಗುತ್ತಿರುವ ನಾಪೋಕ್ಲು ನಗರ ರಸ್ತೆ ಕಾಮಗಾರಿಯನ್ನು ಶಾಸಕ ಕೆ.ಜಿ. ಬೋಪಯ್ಯ ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ನಗರದ ರಸ್ತೆ ಗುಂಡಿಗಳಿAದ ಕೂಡಿತ್ತು, ಇದನ್ನು ಮನಗಂಡು ಸುಮಾರು ರೂ. ೮೦ ಲಕ್ಷ ವೆಚ್ಚದಲ್ಲಿ ನಗರದ ಮಾರುಕಟ್ಟೆ ಬಳಿಯಿಂದ ವೀರಾಜಪೇಟೆ ರಸ್ತೆಯ ಪೆಟ್ರೋಲ್ ಬಂಕ್‌ವರೆಗೆ ರಸ್ತೆಯನ್ನು ಡಾಂಬರೀಕರಣ ಮಾಡಲಾಗುತ್ತ್ತಿದ್ದು, ಜನರು ಸಹಕಾರ ನೀಡಬೇಕು ಎಂದರು.

ಮಾರಕ ರೋಗ ಕೊರೊನಾ ತಡೆಗಟ್ಟಲು ಮಾಸ್ಕ್ ಧರಿಸಿ ಪ್ರತಿಯೊಬ್ಬರು ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.

ಈ ಸಂದರ್ಭ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಮಡಿಕೇರಿ ತಾಲೂಕು ಬಿ.ಜೆ.ಪಿ. ರೈತ ಮೋರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಗ್ರಾಮ ಪಂಚಾಯಿತಿ ಸದಸ್ಯೆ ಕುಲ್ಲೇಟಿರ ಹೇಮ ಅರುಣ, ಬಿದ್ದಂಡ ಉಷಾ ದೇವಮ್ಮ, ಕೊಟೇರ ನೀಲಮ್ಮ, ಅರೆಯಡ ಅಶೋಕ, ಗ್ರಾಹಕರ ಸ್ಟೋರ್ ಅಧ್ಯಕ್ಷ ಪಟ್ರಪಂಡ ಮೋಹನ್, ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಡಾ. ಅವನಿಜ ಸೋಮಯ್ಯ, ಕೊಡವ ಸಮಾಜದ ಉಪಾಧ್ಯಕ್ಷ ಮಾಳೆಯಂಡ ಅಯ್ಯಪ್ಪ, ಬಿದ್ದಾಟಂಡ ಜಿನ್ನು ನಾಣಯ್ಯ, ಕೆ.ಎ. ಹ್ಯಾರಿಸ್, ಲೋಕೋಪಯೋಗಿ ಇಲಾಖೆ ಅಭಿಯಂತರ ಸತೀಶ್, ಗುತ್ತಿಗೆದಾರ ಸಿ.ಪಿ. ಪ್ರವೀಣ್, ಗ್ರಾಮಸ್ಥರು ಮತ್ತಿತರರು ಇದ್ದರು.