ಶನಿವಾರಸಂತೆ, ಜ. ೨೪: ಕಣಗಲು ಗ್ರಾಮದ ಮಹಿಳೆ ಶಾಂತಮ್ಮ (೬೫) ತಾ. ೧೮ರಂದು ರಾತ್ರಿ ನಾಕಲಗೋಡು ಗ್ರಾಮದ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಅದೇ ಗ್ರಾಮದ ಯಶ್ವಂತ್ ಕುಮಾರ್ ಹಾಗೂ ಅವರ ಮಗ ಅರುಣ್ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿ, ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಈ ಸಂದರ್ಭ ಗ್ರಾಮದ ಶಾಂತಕುಮಾರ್ ಎಂಬವರು ಸಹ ಮನೆಯಿಂದ ಕಬ್ಬಿಣದ ರಾಡು ಹಿಡಿದು ಬಂದು ಕೃತ್ಯಕ್ಕೆ ಜೊತೆಯಾಗಿದ್ದು, ಶಾಂತಮ್ಮ ಜೋರಾಗಿ ಕೂಗಿಕೊಂಡಾಗ ಪಕ್ಕದ ಮನೆಯವರು ಜಗಳ ಬಿಡಿಸಲು ಪ್ರಯತ್ನಿಸಿ, ಶಾಂತಮ್ಮ ಅವರ ಪುತ್ರ ಸಂಪತ್ ಕುಮಾರ್ನನ್ನು ಕರೆದಿರುತ್ತಾರೆ. ಸ್ಥಳಕ್ಕೆ ಬಂದು ತನ್ನ ತಾಯಿ ಮೇಲೆ ಹಲ್ಲೆ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ ಮಗನ ಮೇಲೂ ಶಾಂತಕುಮಾರ್ ಮತ್ತು ಅರುಣ್ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ, ಪೊಲೀಸರಿಗೆ ದೂರು ನೀಡಿದರೆ ತಾಯಿ - ಮಗ ಇಬ್ಬರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿದ್ದ ತಾಯಿ - ಮಗ ಇಬ್ಬರೂ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆದಿರುತ್ತಾರೆ.
ತಾ. ೨೩ರಂದು ಶಾಂತಮ್ಮ ಶನಿವಾರಸಂತೆ ಪೊಲೀಸ್ ಠಾಣೆಗೆ ಹಾಜರಾಗಿ ತನ್ನನ್ನು ಹಾಗೂ ತನ್ನ ಮಗನನ್ನು ಕೊಲೆ ಮಾಡಲು ಪ್ರಯತ್ನಿಸಿದ ಯಶವಂತ್ ಕುಮಾರ್ ಮತ್ತು ಅರುಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ಸಂಬAಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.