ಮಡಿಕೇರಿ, ಜ. ೨೪: ಕೊಡಗು ಜಿಲ್ಲೆಯಲ್ಲಿ ಸೋಮವಾರ ೬೫೭ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೨೨೩, ಸೋಮವಾರಪೇಟೆ ತಾಲೂಕಿನಲ್ಲಿ ೨೪೫, ವೀರಾಜಪೇಟೆ ತಾಲೂಕಿನಲ್ಲಿ ೧೮೯ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯ ೧೯ ಪ್ರದೇಶಗಳನ್ನು ಕಂಟೈನ್ಮೆAಟ್ ಝೋನ್‌ಗಳಾಗಿ ಪರಿವರ್ತಿಸಲಾಗಿದೆ. ಅದಲ್ಲದೆ ೫ ಸಾರ್ವಜನಿಕ ಪ್ರದೇಶಗಳನ್ನು ಕಂಟೈನ್ಮೆAಟ್ ಝೋನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೪೦,೨೯೮ ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಒಟ್ಟು ೩೬,೬೬೩ ಮಂದಿ ಗುಣಮುಖರಾಗಿದ್ದಾರೆ. ೩೧೯೬ ಸಕ್ರಿಯ ಕೇಸ್‌ಗಳಿವೆ. ಒಟ್ಟು ೨೩೨ ಕಂಟೈನ್ಮೆAಟ್ ಝೋನ್, ೪೩೯ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.