ವೀರಾಜಪೇಟೆ, ಜ. ೨೪: ಓಡಿಪಿ ಸಂಸ್ಥೆ ಹಾಗೂ ಅಂದೇರಿ ಹಿಲ್ಪೆ ಜರ್ಮನಿ ಇವರ ಸಹಯೋಗದಲ್ಲಿ ವೀರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ರೈತ ಉತ್ಪನ್ನ ಕೂಟದ ನೊಂದಾಯಿತ ಸದಸ್ಯರುಗಳಿಗೆ ರಾಸಾಯನಿಕ ಗೊಬ್ಬರವನ್ನು ವಿತರಿಸಲಾಯಿತು. ರೈತರಿಗೆ ಗೊಬ್ಬರ ವಿತರಣಾ ಕಾರ್ಯಕ್ರಮದಲ್ಲಿ ಓಡಿಪಿ ಸಂಸ್ಥೆಯ ಸಂಯೋಜಕ ರಾದ ಮೈಸೂರಿನ ಜಾನ್ ರಾಡ್ರಿಗಸ್, ವಲಯ ಸಂಯೋಜಕಿ ಜಾಯ್ಸ್ ಮೆನೆಜಸ್, ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷ ಉಪೇಂದ್ರ, ಅಭಿವೃದ್ಧಿ ಅಧಿಕಾರಿ ರಾಜನ್, ಸದಸ್ಯರಾದ ಫಾತಿಮ, ಕೆ.ಟಿ. ಬಶೀರ್, ಓಡಿಪಿ ಕಾರ್ಯಕರ್ತರಾದ ರೀಟಾ ಜೋಸೆಫ್ ಮತ್ತು ಅನಿಲ್, ಸಮಿತಿ ಸದಸ್ಯೆ ರೇಷ್ಮ ಹಾಗೂ ಸಂಸ್ಥೆಯ ಸದಸ್ಯರುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ೩೦ಕ್ಕೂ ಹೆಚ್ಚು ರೈತ ಸದಸ್ಯರು ಗೊಬ್ಬರ ಪಡೆದುಕೊಂಡರು.