ಪೊನ್ನಂಪೇಟೆ, ಜ. ೨೩: ಪೊನ್ನಂಪೇಟೆ ನಾಗರಿಕ ವೇದಿಕೆಯ ವತಿಯಿಂದ ನೂತನ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು. ನಾಗರಿಕ ವೇದಿಕೆ ಪ್ರಮುಖರು ಸುಜಾ ಕುಶಾಲಪ್ಪ ಅವರನ್ನು ಭೇಟಿಯಾಗಿ ಸನ್ಮಾನಿಸಿದರು.
ಈ ಸಂದರ್ಭ ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಲು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಈಗಾಗಲೇ ಪೊನ್ನಂಪೇಟೆ ನೂತನ ತಾಲೂಕಿಗೆ ಮಿನಿ ವಿಧಾನಸೌಧ ನಿರ್ಮಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ತಲುಪಿರುತ್ತದೆ. ಆದ್ದರಿಂದ ೨೦೨೨-೨೩ನೇ ಆಯವ್ಯಯ ಸಾಲಿನಲ್ಲಿ ಅನುದಾನ ಬಿಡುಗಡೆಗೊಳಿಸುವಂತೆ, ಮುಂದಿನ ಅಧಿವೇಶನದಲ್ಲಿ ಮಿನಿ ವಿಧಾನಸೌಧದ ಪ್ರಸ್ತಾವನೆ ಮಂಜೂರಾತಿ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿಕೊಂಡರು.
ಮನವಿ ಪತ್ರವನ್ನು ಸ್ವೀಕರಿಸಿದ ಸುಜಾಕುಶಾಲಪ್ಪನವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು. ಈ ಸಂದರ್ಭ ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷ ಪಿ.ಬಿ. ಪೂಣಚ್ಚ, ಆಡಳಿತ ಮಂಡಳಿ ಸದಸ್ಯರುಗಳಾದ ಎಂ.ಪಿ. ಅಪ್ಪಚ್ಚು, ಆಲಿರ ಎರ್ಮು ಹಾಜಿ, ಸಿ.ಎಂ. ಪೊನ್ನಪ್ಪ, ಎಂ.ಎಸ್. ಕುಶಾಲಪ್ಪ, ಪಿ.ಕೆ. ಹರೀಶ್, ತೀತಿರ ಜಯ ಹಾಗೂ ಇನ್ನಿತರ ಸದಸ್ಯರು ಹಾಜರಿದ್ದರು.