ಶ್ರೀಮಂಗಲ, ಜ. ೨೩: ಕೊಡಗು ಬೆಳೆಗಾರ ಒಕ್ಕೂಟದಿಂದ ವಿಧಾನ ಪರಿಷತ್ ನೂತನ ಸದಸ್ಯರಾಗಿ ಚುನಾಯಿತರಾಗಿರುವ ಮಂಡೇಪAಡ ಸುಜಾ ಕುಶಾಲಪ್ಪ ಅವರನ್ನು ಭೇಟಿ ಮಾಡಿ ಬೆಳೆಗಾರರ ಸಮಸ್ಯೆಗಳನ್ನು ಸರಕಾರದ ಮಟ್ಟದಲ್ಲಿ ಇತ್ಯರ್ಥಪಡಿಸಲು ಮನವಿ ಮಾಡಲಾಯಿತು.
ಪೊನ್ನಂಪೇಟೆಗೆ ಭೇಟಿ ಮಾಡಿದ ಸಂದರ್ಭ ಸುಜಾಕುಶಾಲಪ್ಪ ಅವರಿಗೆ ಅಭಿನಂದನೆ ಸಲ್ಲಿಸಿ, ಸ್ಮರಣಿಕೆಯ ಪುಸ್ತಕವನ್ನು ನೀಡಲಾಯಿತು. ಈ ಸಂದರ್ಭ ಮಾತನಾಡಿದ ಸುಜಾ ಕುಶಾಲಪ್ಪ ಅವರು, ಕೊಡಗಿನ ಜನರ ಸಮಸ್ಯೆಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ. ದಿನದ ೨೪ ಗಂಟೆ ಜನರ ಸಂಪರ್ಕದಲ್ಲಿರುತ್ತೇನೆ. ಅಧಿಕಾರ ಸಿಕ್ಕಿದಾಗಲೂ ಜನರ ಇನ್ನಷ್ಟು ಕೆಲಸ ಮಾಡಲು ಶ್ರಮಿಸುವುದಾಗಿ ನುಡಿದರು.
ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಕೇಚಂಡ ಕುಶಾಲಪ್ಪ, ಪ್ರ. ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ನಿರ್ದೇಶಕ ಮದ್ರಿರ ಗಿರೀಶ್ ಗಣಪತಿ ಉಪಸ್ಥಿತರಿದ್ದರು.