ಮಡಿಕೇರಿ, ಜ. ೨೩: ಮಂಗಳೂರು ಹಾಗೂ ಬಹರೇನ್ನ ಸಂಶೋಧಕರಿAದ ನಡೆಸಲಾದ ಅಧ್ಯಯನವೊಂದು ದಿನಕ್ಕೊಂದು ವಿಷಯದ ಕುರಿತಾದರೂ ಆನ್ಲೈನ್ ತರಗತಿ ನಡೆಸುವ ಅವಶ್ಯಕತೆ ಇರುವುದಾಗಿ ಪ್ರತಿಪಾದಿಸಿದೆ. ಮಂಗಳೂರಿನ ಖಾಸಗಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಬಹರೇನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಮಂಗ ಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯವರಾದ ಶಾಕಿರಾ ಇರ್ಫಾನ್ ಅವರನ್ನೊಳಗೊಂಡ ತಂಡ ‘ಶಿಕ್ಷಣದ ಮೇಲೆ ಕೋವಿಡ್-೧೯ ರ ಪರಿಣಾಮ’ ಎಂಬ ವಿಷಯದ ಕುರಿತು ಅಧ್ಯಯನ ನಡೆಸಿ ವರದಿ ನೀಡಿದೆ.
ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹೊಂದಿಕೊAಡಿದ್ದಾರೆ. ಆದುದರಿಂದ ಕನಿಷ್ಟ ಒಂದು ವಿಷಯದ ಕುರಿತು ಪ್ರತಿನಿತ್ಯ ಆನ್ಲೈನ್ ತರಗತಿ ನಡೆಸುವುದು ಸೂಕ್ತ ಎಂದು ಅಧ್ಯಯನದ ವರದಿ ಹೇಳುತ್ತದೆ.
ಅಧ್ಯಯನ ನಡೆಸುವಾಗ ೩೪೭ ಸ್ನಾತಕೋತ್ತರ ಕಾಲೇಜುಗಳ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಲಾಗಿದೆ. ಕರ್ನಾಟಕದ ಮಂಗಳೂರು, ಶ್ರೀನಿವಾಸ, ಯೆನೆಪೋಯ, ಬೆಂಗಳೂರು, ವಿ.ಟಿ.ಯು, ನಿಟ್ಟೆ ಹಾಗೂ ಮಣಿಪಾಲ್ ವಿಶ್ವವಿದ್ಯಾಲಯಗಳಡಿಯಲ್ಲಿ ಬರುವ ಕಾಲೇಜುಗಳ ವಿದ್ಯಾರ್ಥಿಗಳಿಂದ ಮಾಹಿತಿ ಪಡೆಯಲಾಗಿದೆೆ. ಈಗಾಗಲೇ ಆನ್ಲೈನ್ ತರಗತಿಗಳಿಗೆ ಬಹಳಷ್ಟು ವಿದ್ಯಾರ್ಥಿಗಳು ಹೊಂದಿಕೊAಡಿದ್ದಾರೆ. ಮುಂದೇನಾದರು ಮತ್ತೊಮ್ಮೆ ಲಾಕ್ಡೌನ್ ಘೋಷಣೆಯಾದಲ್ಲಿ ಆನ್ಲೈನ್ ತರಗತಿಗಳು ಉಪಯೋಗಕ್ಕೆ ಬರಲಿವೆ ಎಂಬದು ಅಧ್ಯಯನ ತಂಡದ ಪ್ರಮುಖರ ಅಭಿಪ್ರಾಯವಾಗಿದೆ.
ಮಂಗಳೂರಿನ ಖಾಸಗಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನಿಯಾಜ್ ಪಂಕಜ್, ಬಹರೇನ್ನ ಕಿಂಗ್ಡA ವಿಶ್ವವಿದ್ಯಾಲಯದ ಹಬೀಬ್ ಉರ್ ರೆಹಮಾನ್, ಬಹರೇನ್ ವಿಶ್ವವಿದ್ಯಾಲಯದ ಮುಸ್ತಫಾ ರಾಜಾ ರಬ್ಬಾನಿ, ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅಭಿನಂದನ್ ಕುಲಾಲ್ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಮಹಮದ್ ತೌಸೀಫ್ ಪಂಡವರಕಲ್ಲು ಹಾಗೂ ಕೊಡಗು ಜಿಲ್ಲೆಯವರಾದ ಶಾಕಿರಾ ಇರ್ಫಾನ್ ಅವರು ಸಂಶೋಧನಾ ತಂಡದಲ್ಲಿದ್ದಾರೆ.
ಅಧ್ಯಯನ ತಂಡದ ಸದಸ್ಯೆ ಶಾಕಿರಾ ಇರ್ಫಾನ್ ಅವರು ಜಿಲ್ಲೆಯ ಹಿರಿಯ ಲೆಕ್ಕಪರಿಶೋಧಕ ಮಡಿಕೇರಿಯ ಅಬ್ದುಲ್ ರೆಹಮಾನ್ ಅವರ ಪುತ್ರಿ.