ಕರ್ನಾಟಕ ಸರಕಾರದ ಆಕ್ಷೇಪ ತಿರಸ್ಕರಿಸಿದ ತಮಿಳುನಾಡು

ತಮಿಳುನಾಡು, ಜ. ೨೩: ರಾಜ್ಯ ಸರ್ಕಾರ ೪,೬೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿ ಮಾಡಲಿರುವ ಹೊಗೆನಕಲ್ ಕುಡಿಯುವ ನೀರಿನ ಎರಡನೇ ಹಂತದ ಯೋಜನೆಗೆ ಕರ್ನಾಟಕ ರಾಜ್ಯ ವ್ಯಕ್ತಪಡಿಸಿರುವ ಆಕ್ಷೇಪವನ್ನು ತಳ್ಳಿಹಾಕಿರುವ ತಮಿಳುನಾಡು ಜಲ ಸಂಪನ್ಮೂಲ ಸಚಿವ ದುರೈ ಮುರುಗನ್, ಕಾವೇರಿ ಜಲ ವಿವಾದ ನ್ಯಾಯಾಧೀಕರಣ ಮತ್ತು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಯೋಜನೆಯನ್ನು ಜಾರಿಗೊಳಿಸಲು ತಮಿಳು ನಾಡಿಗೆ ಎಲ್ಲಾ ಕಾನೂನು ಹಕ್ಕುಗಳಿವೆ ಎಂದು ಹೇಳಿದ್ದಾರೆ. ಸಂಪುಟ ಸಹೋದ್ಯೋಗಿಗಳ ಜೊತೆ ವರ್ಚುವಲ್ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಂತರರಾಜ್ಯ ಜಲವಿವಾದಕ್ಕೆ ಸಂಬAಧಪಟ್ಟAತೆ ತಮಿಳುನಾಡು ಸರ್ಕಾರದ ವಿರುದ್ಧ ಹೋರಾಡಲು ಸರ್ಕಾರ ಮುಂದಿದ್ದು ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷ ಸಭೆ ಕರೆಯಲಾಗುವುದು ಎಂದು ಹೇಳಿದ್ದಾರೆ. ಹೊಗೆನಕಲ್ ಕುಡಿಯುವ ನೀರಿನ ಯೋಜನೆಗೆ ಮತ್ತು ತಮಿಳು ನಾಡು ಯೋಜಿಸಿದಂತೆ ನದಿಗಳ ಅಂತರ ಜೋಡಣೆಗೆ ಸರ್ಕಾರ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದೇವೆ. ಕೇಂದ್ರ ಜಲ ಆಯೋಗ ಮುಂದೆ ಯೋಜನೆಗೆ ಅನುಮತಿ ನೀಡಬಾರದೆಂದು ಮನವಿ ಮಾಡಿದ್ದೇವೆ ಎಂದರು. ನಿನ್ನೆಯ ಸಿಎಂ ನೇತೃತ್ವದ ಸಭೆಯಲ್ಲಿ ಕೃಷ್ಣ ಮತ್ತು ಕಾವೇರಿ ಜಲ ವಿವಾದ, ಮಹಾದಾಯಿ ಯೋಜನೆ ಕುರಿತು ಚರ್ಚೆ ನಡೆಸಲಾಯಿತು. ಈ ಮಧ್ಯೆ, ಕರ್ನಾಟಕ ಸರ್ಕಾರ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿರುವ ತಮಿಳು ನಾಡು ಜಲ ಸಂಪನ್ಮೂಲ ಸಚಿವ ದುರೈ ಮುರುಗನ್, ೨೦೦೭ರ ಫೆಬ್ರವರಿ ೫ ರಂದು ಸಿಡಬ್ಲ್ಯುಡಿಟಿ ಅಂತಿಮ ಆದೇಶ ನೀಡಿದಾಗ ಇದು ಕಾವೇರಿ ನೀರಾವರಿ ಪ್ರದೇಶವನ್ನು ಆಧರಿಸಿ ನದಿಯ ಪ್ರತಿಯೊಂದು ರಾಜ್ಯಗಳಿಗೆ ನೀರನ್ನು ಹಂಚಿಕೆ ಮಾಡಿದೆ ಎಂದಿದ್ದಾರೆ. ಅಂತಿಮ ತೀರ್ಪಿನಲ್ಲಿ ೨.೨ ಟಿಎಂಸಿ ಅಡಿ ನೀರನ್ನು ಬಳಕೆಗೆ ಬಳಸಬಹುದು ಎಂದು ನಿರ್ದಿಷ್ಟಪಡಿಸಲಾಗಿದೆ. ಅನುಮತಿ ಪಡೆದ ನೀರಾವರಿ ಯೋಜನೆಗಳು ಮತ್ತು ೨೦೧೧ ರ ಜನಗಣತಿಯ ಆಧಾರದ ಮೇಲೆ ತಮಿಳುನಾಡು ೨೫.೭೧ ಟಿಎಂಸಿ ಅಡಿ ನೀರನ್ನು ಪಡೆದುಕೊಂಡಿದೆ. ಇದನ್ನು ೨೦೧೮ ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಸಿಡಬ್ಲ್ಯುಡಿಟಿಯ ಅಂತಿಮ ತೀರ್ಪಿನ ಕಲಂ ೧೮ರ ಪ್ರಕಾರ, ತಮಿಳುನಾಡಿಗೆ ಕುಡಿಯುವ ಅವಶ್ಯಕತೆಗಳಿಗೆ ನೀರನ್ನು ಬಳಸಿಕೊಳ್ಳುವ ಹಕ್ಕನ್ನು ನೀಡಲಾಗಿದೆ. ದೇಶೀಯ ಬಳಕೆ, ಸ್ಥಳೀಯ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಗೆ ವಿತರಣೆ ಇತ್ಯಾದಿಗಳಿಗೆ ಯಾವುದೇ ಜಲಾಶಯದಿಂದ ನೀರನ್ನು ಬಿಡುಗಡೆ ಮಾಡಿದರೆ, ಅದು ಸಂಬAಧಿತ ರಾಜ್ಯಕ್ಕೆ ವಿರುದ್ಧವಾಗಿರುತ್ತದೆ. ಇದನ್ನು ಅWಆಖಿಯ ಅಂತಿಮ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ತಮಿಳುನಾಡು ಜಲ ಸಂಪನ್ಮೂಲ ಸಚಿವರು ಹೇಳಿದ್ದಾರೆ.

ಲಸಿಕೆ ನೀಡಿಕೆಯಲ್ಲಿ ಗುರಿ ಸಾಧನೆ

ಬೆಂಗಳೂರು, ಜ. ೨೩: ಕೊರೊನಾ ಲಸಿಕೆ ವಿಚಾರದಲ್ಲಿ ರಾಜ್ಯ ಅಪೂರ್ವ ಸಾಧನೆ ಮಾಡಿದ್ದು, ೧೮ ವರ್ಷ ಮೀರಿದ ಎಲ್ಲರಿಗೂ ಮೊದಲ ಡೋಸ್ ಲಸಿಕೆ ನೀಡುವ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ೧೮ ವರ್ಷ ಮೀರಿದ ನಾಲ್ಕು ಕೋಟಿ ೮೯ ಲಕ್ಷದ ೧೬ ಸಾವಿರ ಮಂದಿಯನ್ನು ಲಸಿಕೆಗಾಗಿ ಗುರುತಿಸಲಾಗಿತ್ತು. ನಿನ್ನೆ ರಾತ್ರಿಯ ವೇಳೆಗೆ ೪ ಕೋಟಿ ೮೯ ಲಕ್ಷದ ೨೯ ಸಾವಿರದ ೮೧೯ ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದು, ಗುರಿ ಮೀರಿ ಶೇ. ೧೦೦.೧ ರಷ್ಟು ಸಾಧನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಉಳಿದಂತೆ ಶೇ. ೮೫.೩ ಮಂದಿ ೨ ನೇ ಡೋಸ್ ಲಸಿಕೆ ಪಡೆದಿದ್ದಾರೆ. ೧೫ ರಿಂದ ೧೮ ವರ್ಷದ ಮಕ್ಕಳ ಲಸಿಕೀಕರಣದಲ್ಲಿ ಶೇ. ೬೮ ರಷ್ಟು ಪ್ರಗತಿಯಾಗಿದೆ. ೪ ಲಕ್ಷದ ೮೦ ಸಾವಿರಕ್ಕಿಂತಲೂ ಹೆಚ್ಚು ಮಂದಿ ಬೂಸ್ಟರ್ ಡೋಸ್ ಪಡೆದಿದ್ದಾರೆ. ಈ ಮಧ್ಯೆ ಕೊರೊನಾ ಪರೀಕ್ಷೆಯಲ್ಲೂ ರಾಜ್ಯ ಉತ್ತಮ ಸಾಧನೆ ತೋರಿದ್ದು, ೬ ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದರು.

ಅಗ್ನಿ ಅವಘಡ - ಇಬ್ಬರು ಸಜೀವ ದಹನ

ವಿಜಯಪುರ, ಜ. ೨೩: ಪ್ಲಾಸ್ಟಿಕ್ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಇಬ್ಬರು ಸಜೀವವಾಗಿ ದಹನವಾದ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಬಸವನಬಾಗೇವಾಡಿ ಕ್ರಾಸ್ ಬಳಿ ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಅಂಗಡಿಗೆ ಬೆಂಕಿ ಬಿದ್ದು ಅದರೊಳಗಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ. ಮೂಲಗಳ ಪ್ರಕಾರ ಅಂಗಡಿಯಲ್ಲಿದ್ದ ರಾಜಸ್ತಾನ ಮೂಲದ ಅಶೋಕ ದೇಶಮುನೆ (೨೫), ಲಿಂಬಾರಾಜ ದೇಶಮುನೆ (೩೫) ಮೃತರು ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ೨ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಷ್ಟರಲ್ಲೇ ಅಂಗಡಿಯೊಳಗೆ ಮಲಗಿದ್ದ ಇಬ್ಬರು ಹೊರಹೋಗಲು ಆಗದೇ ಸುಟ್ಟು ಕರಕಲಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

೧೬೫ ಓಮಿಕ್ರಾನ್ ಪ್ರಕರಣಗಳು

ಬೆಂಗಳೂರು, ಜ. ೨೩: ಬೆಂಗಳೂರಿನಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇಂದು ಬರೋಬ್ಬರಿ ೧೬೫ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿದ್ದರೂ ಇಂದು ಬೆಂಗಳೂರಿನಲ್ಲಿ ೧೬೫ ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೯೩೧ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಹುಲಿ ಗಣತಿ ಆರಂಭ

ಚಾಮರಾಜನಗರ, ಜ. ೨೩: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ೫ನೇ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಆರಂಭಗೊAಡಿದ್ದು, ೧೨೦ ಸಿಬ್ಬಂದಿಗಳೊAದಿಗೆ ಹುಲಿ ಗಣತಿ ಆರಂಭಿಸಲಾಗಿದೆ. ಹುಲಿ ಅಂದಾಜು ಪ್ರಕ್ರಿಯೆಗೆ ಇದೇ ಮೊದಲ ಬಾರಿಗೆ ಎಂ ಸ್ಪೆçöÊಪ್ಸ್ ಎಂಬ ಎಕೋಲಾಜಿಕಲ್ ಆ್ಯಪನ್ನು ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ. ದೇಶದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಅಖಿಲ ಭಾರತ ಹುಲಿ ಗಣತಿ ಪ್ರಕ್ರಿಯೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲೂ ಆರಂಭವಾಗಿದೆ. ಇಂದಿನಿAದ ಫೆಬ್ರವರಿ ೮ ರವರಗೆ ಗಣತಿ ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದಲ್ಲಿ ಮಾಂಸಹಾರಿ ಹಾಗೂ ಸಸ್ಯಹಾರಿ ಪ್ರಾಣಿಗಳ ಓಡಾಟಗಳ ಕುರಿತಾದ ಗುರುತುಗಳು, ಅವುಗಳ ಹಿಕ್ಕೆ, ಲದ್ದಿ, ಪಾದದ ಗುರುತು, ಪರಚಿದ ಗುರುತುಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತದೆ. ಬಂಡೀಪುರವನ್ನು ಮೂರು ಬ್ಲಾಕ್‌ಗಳನ್ನಾಗಿ ವಿಂಗಡಿಸಿ ೧೧೨ ಗಸ್ತುಗಳಲ್ಲಿ ಗಣತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಕಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಹೊರಗಿನಿಂದ ಬಂದವರಿAದ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ಗಣತಿ ಕಾರ್ಯದಲ್ಲಿ ಸ್ವಯಂಸೇವಕರ ಸೇವೆ ಬಳಸಿಕೊಳ್ಳುತ್ತಿಲ್ಲ. ಗಣತಿ ಕಾರ್ಯದಲ್ಲಿ ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು ಅರಣ್ಯ ವೀಕ್ಷಕರು ಸೇರಿದಂತೆ ೧೨೩ ಮಂದಿ ಗಣತಿ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಮಂಜುನಾಥ್ ವಿಧಿವಶ

ಬೆಂಗಳೂರು, ಜ. ೨೩: ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ, ಗಡಿ ಮತ್ತು ರಾಜ್ಯ ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ಎಲ್. ಮಂಜುನಾಥ್ ಕಳೆದ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸಮೀಪ ಅವರ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ, ಅವರಿಗೆ ೬೮ ವರ್ಷ ವಯಸ್ಸಾಗಿದ್ದು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಬೆಂಗಳೂರು ಹೊರವಲಯ ಕುಣಿಗಲ್‌ನ ಕೆಂಪಲಿAಗನಹಳ್ಳಿಯ ತೋಟದಲ್ಲಿ ಅಂತ್ಯಕ್ರಿಯೆ ನಡೆಯಿತು. ೧೯೭೪ರ ಸೆಪ್ಟೆಂಬರ್ ೧೩ ರಂದು ಹೈಕೋರ್ಟ್ನಲ್ಲಿ ತಮ್ಮ ವಕೀಲ ವೃತ್ತಿಯನ್ನು ಆರಂಭಿಸಿದ್ದ ಕೆ.ಎಲ್. ಮಂಜುನಾಥ್ ೨೦೦೦ದ ಡಿಸೆಂಬರ್ ೧೧ ರಂದು ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ೨೦೧೫ರ ಏಪ್ರಿಲ್ ೨೦ ರಂದು ಹಿರಿಯ ನ್ಯಾಯಮೂರ್ತಿಯಾಗಿ ನಿವೃತ್ತಿ ಪಡೆದರು.