ಗೋಣಿಕೊಪ್ಪಲು, ಜ.೨೧: ಕಳೆದ ಹತ್ತು ದಿನಗಳ ಹಿಂದೆ ಆರಂಭಗೊAಡ ಹುಲಿ ಕಾರ್ಯಾಚರಣೆ ಇದೀಗ ಸ್ಥಗಿತಗೊಳ್ಳುವ ಸಾಧ್ಯತೆ ಕಂಡುಬAದಿದೆ.
ಗೋಣಿಕೊಪ್ಪ ಆರನೇ ವಿಭಾಗದ ನಿವಾಸಿ ಕುಪ್ಪಂಡ ಸಂಜು ಅವರಿಗೆ ಸೇರಿದ್ದ ಎರಡು ಗೂಳಿಗಳ ಮೇಲೆ ದಾಳಿ ನಡೆಸಿದ್ದ ಹುಲಿಯು ಕಳೆದ ನಾಲ್ಕು ದಿನಗಳ ಹಿಂದೆ ಪಾಲಿಬೆಟ್ಟ ಸಮೀಪದ ಟಾಟಾ ಕಾಫಿಯಲ್ಲಿನ ಹಸುವನ್ನು ಕೊಂದು ಹಾಕಿ ನಂತರ ದೇವಮಚ್ಚಿ ಅರಣ್ಯ ಪ್ರದೇಶದತ್ತ ಹೆಜ್ಜೆ ಹಾಕಿರುವ ಬಗ್ಗೆ ಕ್ಯಾಮರಾದಲ್ಲಿ ಹುಲಿಯ ಚಲನವಲನಗಳು ಸೆರೆಯಾಗಿವೆ.
ಕ್ಯಾಮರಾದಲ್ಲಿ ಸೆರೆಯಾಗಿದ್ದ ಹುಲಿಯು ದ.ಕೊಡಗಿನ ಬೆಳ್ಳೂರು, ತೂಚಮಕೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ರೈತರ ಕೊಟ್ಟಿಗೆಗಳಿಗೆ ದಾಳಿ ನಡೆಸಿ ಅಲ್ಲಿ ಕಟ್ಟಲಾಗಿದ್ದ ಹಸುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದಾಗಿ ಹುಲಿಯ ಸೆರೆಗೆ ಹಿರಿಯ ಅರಣ್ಯ ಅಧಿಕಾರಿಗಳು ಆದೇಶ ನೀಡಿದ್ದರು.
ಹುಲಿ ಕಾರ್ಯಾಚರಣೆ ತಂಡ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಗೋಣಿಕೊಪ್ಪದ ಸಂಜು ಮನೆಯ ಬಳಿ ಹಾಗೂ ತೂಚಮಕೇರಿ ಬಳಿ ಅಟ್ಟಣಿಕೆಯನ್ನು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಕಾರ್ಯಾಚರಣೆ ತಂಡ ಹುಲಿಯ ಸಂಚಾರದ ಸಂಶಯವಿರುವ ವಿವಿಧ ಸ್ಥಳಗಳಲ್ಲಿ ರಾತ್ರಿಯ ವೇಳೆ ಕ್ಯಾಮರಾ ಇಟ್ಟು ಹುಲಿಯ ಸಂಚಾರದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು ಯಾವುದೇ ಚಿತ್ರಗಳು ಸೆರೆಯಾಗಲಿಲ್ಲ.
ಇತ್ತ ತೂಚಮಕೇರಿ ಸರಕಾರಿ ಶಾಲಾ ಆವರಣದಲ್ಲಿ ಕಳೆದ ಹತ್ತು ದಿನಗಳಿಂದ ಬೀಡು ಬಿಟ್ಟಿರುವ ಹುಲಿ ಕಾರ್ಯಾಚರಣೆ ತಂಡದೊAದಿಗೆ ವೀರಾಜಪೇಟೆ ಡಿಎಫ್ಒ ಚಕ್ರಪಾಣಿ ಸುದೀರ್ಘ ಸಭೆ ನಡೆಸಿ ಇಲ್ಲಿಯ ತನಕ ಪ್ರತಿ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇದೀಗ ಹುಲಿಯು ಅರಣ್ಯ ಪ್ರದೇಶದತ್ತ ಮತ್ತೆ ಮರಳಿರುವುದರಿಂದ ಸಿಬ್ಬಂದಿಗಳು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಹೀಗಾಗಿ ಕಾರ್ಯಾಚರಣೆ ಸ್ಥಗಿತ ಗೊಳಿಸುವ ಬಗ್ಗೆ ಹಿರಿಯ ಅಧಿಕಾರಿಗಳು ಡಿಎಫ್ಒ ಗಮನ ಸೆಳೆದರು.
ಅಗತ್ಯ ಬಿದ್ದಲ್ಲಿ ಮತ್ತೆ ಕ್ಯಾಂಪ್ ಆರಂಭಿಸುವ ಬಗ್ಗೆ ಸುದೀರ್ಘ ಚರ್ಚೆಯೂ ನಡೆಯಿತು. ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಮಾತಿಗೆ ಮನ್ನಣೆ ನೀಡಿರುವ ಡಿಎಫ್ಒ ಚಕ್ರಪಾಣಿ ಕಾರ್ಯಾಚರಣೆ ಸ್ಥಗಿತ ಗೊಳಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ.
- ಹೆಚ್.ಕೆ.ಜಗದೀಶ್