ಮಡಿಕೇರಿ, ಜ. ೨೨: ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾ ವ್ಯಾಪ್ತಿಯ ಕೋತೂರು ಗ್ರಾಮದ ಸುನಿಲ್ (೨೩) ಎಂಬ ಯುವಕ ತಾ. ೧೧ ರಿಂದ ನಾಪತ್ತೆಯಾಗಿದ್ದಾನೆ. ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಈತನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯಕ್ಕೆ ವಿಚಾರಣೆಗೆಂದು ತೆರಳಿದ್ದ ಸುನಿಲ್ ಹಿಂತಿರುಗಿಲ್ಲ ಎಂದು ಆತನ ತಾಯಿ ರೀಟಾ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸುಳಿವು ದೊರೆತಲ್ಲಿ ಕುಟ್ಟ ಪೊಲೀಸ್ ಠಾಣೆ ೨೪೪೧೦೦, ಜಿಲ್ಲಾ ಪೊಲೀಸ್ ಕಚೇರಿ ೨೨೯೦೦೦ಗೆ ಮಾಹಿತಿ ನೀಡಲು ಇಲಾಖಾ ಪ್ರಕಟಣೆ ಕೋರಿದೆ.