ಶ್ರೀಮಂಗಲ, ಜ. ೨೨: ಕೊಡವ ಸಮುದಾಯಕ್ಕೆ ಮಠಗಳಾಗಲಿ ಹಾಗೂ ಗುರುಗಳಾಗಲಿ ಇಲ್ಲ. ಆದ್ದರಿಂದ ಕೊಡವ ಸಮಾಜಗಳು ಜನಾಂಗವನ್ನು ಸೂಕ್ತ ಮಾರ್ಗದರ್ಶನದೊಂದಿಗೆ ಸುಭದ್ರತೆಯತ್ತ ಮುನ್ನೆಡೆಸಬೇಕೆಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕರೆ ನೀಡಿದರು.

ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಸಮಾಜದ ಸಭಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೊಡವರು ತಮ್ಮ ಜಾಗವನ್ನು ಮಾರಾಟ ಮಾಡುವುದು ಜನಾಂಗದ ಅಸ್ತಿತ್ವಕ್ಕೆ ದಕ್ಕೆಯಾಗಲಿದೆ. ತಮ್ಮ ಜಾಗ ಮಾರಾಟ ಮಾಡಿ ಹೊರರಾಜ್ಯದವರಿಗೆ ಇಲ್ಲಿ ನೆಲೆಸಲು ಅವಕಾಶ ಕಲ್ಪಿಸಿದಂತಾ ಗುತ್ತದೆ. ಜಾಗವನ್ನು ಮಾರಾಟ ಮಾಡದೇ ಬೇರೆಡೆ ಉದ್ಯೋಗ ಮಾಡುವ ಬದಲು ತಮ್ಮ ಕೃಷಿ ಭೂಮಿ ಯಲ್ಲಿಯೇ ವೈಜ್ಞಾನಿಕ ವಾಗಿ ಆಧುನಿಕ ಕೃಷಿ ಪದ್ಧತಿಯ ಮೂಲಕ ನೆಲೆ ಕಂಡುಕೊAಡು ಲಾಭಗಳಿಸಬಹುದು.ಕೊಡವ ಜನಾಂಗದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಇದೊಂದು ಅಪಾಯಕಾರಿ ಸೂಚನೆಯಾಗಿದೆ. ಇದರ ಬಗ್ಗೆ ಗಂಭೀರವಾಗಿ ಕೊಡವ ಸಮುದಾಯ ಚಿಂತಿಸಬೇಕೆAದರು.

ಅಧಿಕಾರ ಇಲ್ಲದಿದ್ದಾಗಲೂ ಜನಪರ ಕೆಲಸವನ್ನು ಮಾಡಿದ್ದು, ಈಗ ಅಧಿಕಾರ ದೊರೆತ್ತಿದ್ದು ಜನರ ಕೆಲಸವನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜ ಅಧ್ಯಕ್ಷ ಚೊಟ್ಟೆಯಕ್‌ಮಾಡ ರಾಜೀವ್ ಬೋಪಯ್ಯ ಅವರು ಜಿಲ್ಲೆಯ ಯಾವುದೇ ಹೋರಾಟ, ಯಾವುದೇ ಪಕ್ಷಕ್ಕೆ ಸಂಘಟನೆ ಮತ್ತು ಹಣಕಾಸು ನೆರವನ್ನು ದಕ್ಷಿಣ ಕೊಡಗು ಯಥೇಚ್ಚವಾಗಿ ನೀಡುತ್ತಾ ಬಂದಿದೆ. ಆದರೆ, ರಾಜಕೀಯ ಪಕ್ಷದಲ್ಲಿ ದಕ್ಷಿಣ ಕೊಡಗಿನ ಜನರಿಗೆ ಅಧಿಕಾರ ಸಿಗುತ್ತಿಲ್ಲ. ಇದರ ನಡುವೆ ಬಹಳ ಹೋರಾಟ ದಿಂದ ಸುಜಾ ಕುಶಾಲಪ್ಪ ಅವರು ವಿಧಾನಪರಿಷತ್ ಸದಸ್ಯರಾಗಿದ್ದಾರೆ.

ಕೊಡವ ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳನ್ನು ಗುರಿ ಮಾಡಿ ಗಾಂಜಾ ವ್ಯಸನಕ್ಕೆ ದಾಸರನ್ನಾ ಗಿಸುವ ಷಡ್ಯಂತ್ರ ನಡೆಯುತ್ತಿದೆ. ಇದರೊಂದಿಗೆ ಕಾವೇರಿ ಕ್ಷೇತ್ರದಲ್ಲಿ ಹೊರಗಿನಿಂದ ಬರುವ ಜನರಿಂದ ಧಾರ್ಮಿಕ ಪವಿತ್ರö್ಯತೆಗೆ ದಕ್ಕೆಯಾಗು ತ್ತಿದ್ದು, ಅಲ್ಲಿ ರಾಜಕೀಯ ಮುಕ್ತವಾದ ವ್ಯವಸ್ಥಾಪನಾ ಸಮಿತಿ ಯಾಗಬೇಕು. ಯುವ ಸಮುದಾಯ ಹಾಗೂ ಧಾರ್ಮಿಕ ಕ್ಷೇತ್ರವನ್ನು ಕಾಪಾಡ ಬೇಕೆಂದು ಮನವಿ ಮಾಡಿದರು.

ಸಮಾಜದ ನಿರ್ದೇಶಕ ಮಲ್ಲಮಾಡ ಪ್ರಭುಪೂಣಚ್ಚ, ಕೊಡವ ಸಮಾಜದ ನ್ಯಾಯಪೀಠದ ಅಧ್ಯಕ್ಷ ಚೆರಿಯಪಂಡ ಉಮೇಶ್ ಉತ್ತಪ್ಪ, ಚಿರಿಯಪಂಡ ರಾಜ ನಂಜಪ್ಪ ಮಾತನಾಡಿದರು.

ವೇದಿಕೆಯಲ್ಲಿ ಸಮಾಜದ ನಿರ್ದೇಶಕರುಗಳಾದ ಮಂಡಚAಡ ದಿನೇಶ್ ಚಿಟ್ಟಿಯಪ್ಪ, ಅಡ್ಡಂಡ ಸುನೀಲ್, ಚೆಪುö್ಪಡೀರ ರಾಕೇಶ್ ದೇವಯ್ಯ, ಮೂಕಳಮಾಡ ಅರಸು ನಂಜಪ್ಪ, ಮೂಕಳೇರ ಲಕ್ಷ ್ಮಣ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಉಪಸ್ಥಿತರಿದ್ದರು.