ಶನಿವಾರಸಂತೆ, ಜ. ೨೨: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನಿಲುವಾಗಿಲು - ಬೆಸೂರು ಗ್ರಾಮಗಳ ಶ್ರೀಬಾಲತ್ರಿಪುರ ಸುಂದರಿ ಕ್ಷೇತ್ರದಲ್ಲಿ ಶ್ರೀಬಾಲತ್ರಿಪುರ ಸುಂದರಿ ಅಮ್ಮನವರ ೯ನೇ ವರ್ಷದ ಕಲಶ ಮಹೋತ್ಸವ ಫೆ. ೪ ರಂದು ನಡೆಯಲಿದೆ.

ಕಲಶ ಮಹೋತ್ಸವದ ಪ್ರಯುಕ್ತ ಅಡ್ಡೆ ಉತ್ಸವ ಮತ್ತು ಶ್ರೀದೇವಿಯವರ ಗ್ರಾಮ ದರ್ಶನ ಸೋಮವಾರದಿಂದ ಆರಂಭವಾಗಿದ್ದು, ಫೆ. ೧ರವರೆಗೆ ನಡೆಯಲಿದೆ. ಉತ್ಸವ ಮೂರ್ತಿಯು ಶ್ರೀಕ್ಷೇತ್ರದ ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ಗ್ರಾಮದ ಮುಖ್ಯ ದೇವಾಲಯದಲ್ಲಿ ಅಲಂಕರಿಸುತ್ತಾರೆ. ಗ್ರಾಮಗಳಲ್ಲಿ ಭಕ್ತಾದಿಗಳು ಶ್ರೀದೇವಿಯವರನ್ನು ತಳಿರು ತೋರಣಗಳಿಂದ ಅಲಂಕರಿಸಿ ಸ್ವಾಗತಿಸಿ, ಸಾಮೂಹಿಕ ಪೂಜಾ ಕಾರ್ಯವನ್ನು ಭಕ್ತಿಯಿಂದ ನಡೆಸಿಕೊಡಬೇಕು ಎಂದು ಶ್ರೀಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಸಿ.ಬಿ. ಪ್ರಸನ್ನ ಕೋರಿದ್ದಾರೆ.