ಸಿದ್ದಾಪುರ, ಜ. ೨೨ : ಕೋಫಿಯಾ ಪ್ರಾಯೋಜಕತ್ವದಲ್ಲಿ ನ್ಯೂ ಕೂರ್ಗ್ ಸ್ಟಾರ್ ಆಯೋಜಿಸಿದ ಕಬಡ್ಡಿ ಲೀಗ್ ಚಾಂಪಿಯನ್ ಪಟ್ಟವನ್ನು ಟೀಂ ಕಾವೇರಿ ತಂಡವು ತನ್ನದಾಗಿಸಿಕೊಂಡಿದೆ.

ನೆಲ್ಲಿಹುದಿಕೇರಿ ಪಟ್ಟಣದ ಮೈದಾನದಲ್ಲಿ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಅಂಬೇಡ್ಕರ್ ಬಾಯ್ಸ್, ಟೀಂ ಎವಂಜರ‍್ಸ್, ನ್ಯೂ ಕೂರ್ಗ್ ಸ್ಟಾರ್, ಟೀಂ ಗನ್ಯಾಯತಿ, ಪ್ರಗತಿ ಸ್ಪೋರ್ಟ್ಸ್ ಅಕಾಡೆಮಿ, ರಿಯಲ್ ಫೈಟರ್ಸ್, ಸ್ಟೆçöÊಕ್ ಫೋರ್ಸ್, ಸಿದ್ದಾಪುರ್ ಬ್ಲಾಸ್ರ‍್ಸ್, ಕ್ಲಾಸಿಕ್ ರೈಡರ್ಸ್, ಸೆವೆನ್ ಸ್ಟಾರ್, ಟೀಂ ಕಾವೇರಿ ಹಾಗೂ ಎನ್‌ವೈಸಿ ನಂಜರಾಯಪಟ್ಟಣ ಸೇರಿ ಹನ್ನೆರಡು ತಂಡಗಳು ಲೀಗ್ ಹಂತದಲ್ಲಿ ಸೆಣಸಾಟ ನಡೆಸಿದವು. ಸೆವೆನ್ ಸ್ಟಾರ್ ಹಾಗೂ ಟೀಂ ಕಾವೇರಿ ಹೆಚ್ಚು ಅಂಕ ಪಡೆದು ಫೈನಲ್ ಪ್ರವೇಶಿಸಿತ್ತು. ಉಬಯ ತಂಡಗಳ ನಡುವೆ ನಡೆದ ಫೈನಲ್ ಪಂದ್ಯಾಟದಲ್ಲಿ ಟೀಂ ಕಾವೇರಿ ೨೭-೨೫ರ ಅಂತರದಲ್ಲಿ ಸೆವೆನ್ ಸ್ಟಾರ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ಪಂದ್ಯಾಟದ ಉತ್ತಮ ರೈಡರ್ ಸೆವೆನ್ ಸ್ಟಾರ್ ತಂಡದ ಸಚಿನ್, ಉತ್ತಮ ಡಿಫೆಂಡರ್ ಟೀಂ ಕಾವೇರಿ ತಂಡದ ಅಭಿಶೀರ್, ಬೆಸ್ಟ್ ಆಲ್ ರೌಂಡರ್ ನ್ಯೂ ಕೂರ್ಗ್ ಸ್ಟಾರ್ ತಂಡದ ಶಾಫಿ ಹಾಗೂ ಎಮರ್ಜಿಂಗ್ ಪ್ಲೆಯರ್ ಪ್ರಶಸ್ತಿಯನ್ನು ಸೆವೆನ್ ಸ್ಟಾರ್ ತಂಡದ ಪ್ರಜ್ವಲ್ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ನೆಲ್ಲಿಹುದಿಕೇರಿ ಗ್ರಾಪಂ ಅಧ್ಯಕ್ಷ ಶಾಬು ವರ್ಗಿಸ್, ಉಪಾಧ್ಯಕ್ಷೆ ಧಮಯಂತಿ, ಸದಸ್ಯರಾದ ಶಂಶೀರ್, ಶಿವದಾಸ್, ಸುಜಾತ, ಅತಿಥಿಗಳಾಗಿ ಶಿಯಾಬ್ ಕೋಫಿಯಾ, ಎಂ.ಎ. ಅಜೀಜ್, ರಾಶಿದ್ ಹಾಗೂ ಇತರರಿದ್ದರು.