ಗೋಣಿಕೊಪ್ಪಲು ಜ.೨೨: ಪ್ರತಿಷ್ಠಿತ ಅಂರ್ರಾಷ್ಟಿçÃಯ ಸಂಸ್ಥೆಯಾದ ಒಸಾಟ್(ಒನ್ ಸ್ಕೂಲ್ ಯಟ್ ಅ ಟೈಮ್) ಸಂಸ್ಥೆಯು ದ.ಕೊಡಗಿನ ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಉತ್ತಮ ಕಲಿಕೆಗಾಗಿ ರೂ.೪೦ ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಿದೆ. ಈ ಬೃಹತ್ ಕಟ್ಟಡವು ತಾ. ೨೪ (ನಾಳೆ) ಲೋಕಾರ್ಪಣೆಯಾಗಲಿದೆ. ಇದರಿಂದಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಕಟ್ಟಡದಲ್ಲಿ ವಿದ್ಯಾರ್ಜನೆ ಮಾಡುವ ಸೌಭಾಗ್ಯ ಒದಗಿ ಬಂದಿದೆ. ಶಾಲಾ ಕೊಠಡಿಗಳು ಮಾತ್ರವಲ್ಲದೆ ರೂ.೬ ಲಕ್ಷ ವೆಚ್ಚದಲ್ಲಿ ಶೌಚಾಲಯ ಕೂಡ ನಿರ್ಮಿಸ ಲಾಗಿದ್ದು, ಇದು ಕೂಡ ಉದ್ಘಾಟನೆಗೊಳ್ಳಲಿದೆ.
ಕಳೆದ ಒಂದು ವರ್ಷದ ಹಿಂದೆ ಒಸಾಟ್ ಸಂಸ್ಥೆಯ ಪ್ರತಿನಿಧಿಗಳಾದ ಪಿ.ವಿ.ಸುಬ್ರಮಣ್ಯ, ಎನ್.ವಿ ಗೋಪಾಲಕೃಷ್ಣ ಭಟ್, ರಮೇಶ್ ಬಾಬು ಹಾಗೂ ತಂಡ ಮಾಯಮುಡಿ ಶಾಲೆಗೆ ಆಗಮಿಸಿ ಅಲ್ಲಿಯ ಆಡಳಿತ ಮಂಡಳಿಯೊAದಿಗೆ ಸಭೆ ನಡೆಸುವ ಮೂಲಕ ಒಸಾಟ್ ಸಂಸ್ಥೆಯ ನಿಯಾಮಾವಳಿಗಳನ್ನು ಪ್ರಸ್ತಾಪಿಸಿ ಸಂಸ್ಥೆಯು ನೀಡುವ ಅತ್ಯಮೂಲ್ಯ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯಲು ಅನುಕೂಲವಾಗುವಂತೆ ಅವಕಾಶ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದರು.
ಸಂಸ್ಥೆ ನೀಡಿದ ಭರವಸೆಯಂತೆ ಇದೀಗ ಶಾಲೆಯ ಆವರಣದಲ್ಲಿ ಉತ್ತಮ ರೀತಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. ಇದರ ಉದ್ಘಾಟನೆಗೆ ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಕಟ್ಟಡದ ನಿರ್ಮಾಣ ಸಮಿತಿಯ ಪದಾಧಿಕಾರಿಗಳು, ಸಿದ್ದತೆ ನಡೆಸಿದ್ದಾರೆ. ಕಟ್ಟಡ ಸಮಿತಿಯ ಪ್ರಮುಖರಾದ ಸಣ್ಣುವಂಡ ವಿಶ್ವನಾಥ್, ಪುಚ್ಚಿಮಾಡ ರಾಯ್ ಮಾದಪ್ಪ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ.
ಈ ಹಿಂದೆ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು
(ಮೊದಲ ಪುಟದಿಂದ) ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ಮಾಡಲು ಕಷ್ಟ ಸಾಧ್ಯವಾಗುತ್ತಿದ್ದುದÀರಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಲಾ ಆಡಳಿತ ಮಂಡಳಿಯು ಒಸಾಟ್ ಸಂಸ್ಥೆಯೊAದಿಗೆ ಸಂಪರ್ಕಿಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿತ್ತು.
ನಂತರ ಸಂಸ್ಥೆಯ ಪ್ರಮುಖರು ಹಲವು ಬಾರಿ ಖುದ್ದು ಪರಿಶೀಲನೆ ನಡೆಸಿ ಸಂಸ್ಥೆಗೆ ವರದಿ ನೀಡಿದ್ದರು. ವರದಿಯ ಆಧಾರದ ಮೇಲೆ ಅವಶ್ಯವಿರುವ ಕಟ್ಟಡ ನಿರ್ಮಾಣಕ್ಕೆ ನೀಲ ನಕ್ಷೆಯೊಂದಿಗೆ ಆಗಮಿಸಿದ ಸಂಸ್ಥೆಯ ನಿರ್ದೇಶಕರು ಅಂದಾಜು ೪೦ ಲಕ್ಷ ಅನುದಾನವನ್ನು ಕಟ್ಟಡ ನಿರ್ಮಾಣಕ್ಕೆ ವಿನಿಯೋಗಿಸಿ ಈ ಬಗ್ಗೆ ಅಗತ್ಯ ದಾಖಲೆ ಪತ್ರಗಳನ್ನು ಆಡಳಿತ ಮಂಡಳಿ ಹಾಗೂ ಮುಖ್ಯೋಪಾದ್ಯಾಯರಿಗೆ ಹಸ್ತಾಂತರ ಮಾಡಿದ್ದರು. ಶಾಲೆಯ ಅಗತ್ಯ ದಾಖಲೆಗಳನ್ನು ಸಂಸ್ಥೆಯು ಪರಿಗಣಿಸಿ ಯೋಜನೆಯನ್ನು ಮಂಜೂರು ಮಾಡಿತ್ತು. ನಾಲ್ಕು ಸುಸಜ್ಜಿತ ಕಟ್ಟಡಗಳು ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ನಂತರದಲ್ಲಿ ನೂತನ ಶೌಚಾಲಯ ನಿರ್ಮಾಣ ಮಾಡಲು ಸಹ ಕಾರ್ಯಪ್ರವೃತ್ತರಾಗಿ ರೂ. ೬ ಲಕ್ಷ ವೆಚ್ಚದಲ್ಲಿ ಶೌಚಾಲಯ ಕಟ್ಟಡ ಕೂಡ ನಿರ್ಮಾಣವಾಗಿದೆ.
ಈ ವೇಳೆ ದಾನಿಗಳು ಸಂಸ್ಥೆಯ ಮೂಲಕ ನೀಡಿರುವ ಹಣವನ್ನು ಲೋಪವಾಗದಂತೆ ಎಚ್ಚರಿಕೆಯಿಂದ ಬಳಸುವಂತೆ ಒಸಾಟ್ ಸಂಸ್ಥೆಯ ಪ್ರತಿನಿಧಿಗಳು ಕಿವಿಮಾತು ಹೇಳಿದ್ದರು. ಒಸಾಟ್ ಒಂದು ಶಾಲೆಯ ಮೂಲಕ ಪೂರಕ ಸಮುದಾಯವನ್ನು ಗ್ರಾಮಗಳಲ್ಲಿ ನಿರ್ಮಿಸುವಲ್ಲಿ ಯಶಸ್ಸನ್ನು ಕಾಣುತ್ತಿದೆ.
ಒಸಾಟ್ನ ಕಾರ್ಯ ಹಲವಾರು ಗ್ರಾಮಗಳಲ್ಲಿ ಅನಕ್ಷರತೆ, ಬಾಲಕಾರ್ಮಿಕ ಸಮಸ್ಯೆಗೆ ಪರಿಹಾರ ಒದಗಿಸಿ, ಬಡ ಪೋಷಕರ ಅಸಹಾಯಕತೆಯನ್ನು ನಿವಾರಣೆ ಮಾಡುವಲ್ಲಿ ದಾಪುಗಾಲು ಇಟ್ಟಿದೆ.
ಸದ್ಯದ ಹಾಗೂ ಬದಲಾದ ಸನ್ನಿವೇಶದಲ್ಲಿ ನಗರ ಪ್ರದೇಶದಲ್ಲಿ ಶಿಕ್ಷಣ ಪದ್ದತಿಯು ಸಮೂಹ / ಡಿಜಿಟಲ್ ಮಾಧ್ಯಮದ ಕಡೆಗೆ ಹೊರಳುತ್ತಿದೆ.
ಆದರೆ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಯ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಸಾಟ್ ಸಂಸ್ಥೆಯು ಡಿಜಟಲೀಕರಣದ ಮೂಲ ಸೌಕರ್ಯಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ದೊರಕಿಸಿಕೊಡಲು ಕಾರ್ಯ ಪ್ರವೃತ್ತವಾಗಿದೆ. ಅಲ್ಲದೆ ಯೋಜನೆಗಳನ್ನು ರೂಪಿಸಿಕೊಂಡಿದೆ.
ಒಸಾಟ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು ಭಾರತದ ಗ್ರಾಮೀಣ ಭಾಗದಲ್ಲಿರುವ ತೀರ ಹಳೆಯದಾದ, ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಗುರುತಿಸಿ ಸುರಕ್ಷಿತ ಹಾಗೂ ಸುಭದ್ರ ಕಟ್ಟಡಗಳನ್ನು ನಿರ್ಮಿಸಿಕೊಡುವ ಸದುದ್ದೇಶವನ್ನು ಹೊಂದಿದೆ.
ಸ್ವಯA ಸೇವಕರಿಂದಲೇ ನಿಭಾಯಿಸಲ್ಪಡುವ ಈ ಸಂಸ್ಥೆ ದಾನಿಗಳಿಂದ ಸ್ವೀಕರಿಸುವ ಶೇ.೧೦೦ ರಷ್ಟು ಹಣವನ್ನು ಸುಭದ್ರ ಶಾಲಾ ಕಟ್ಟಡದ ನಿರ್ಮಾಣಕ್ಕೆ ಉಪಯೋಗಿಸಿ ಹಳ್ಳಿಯ ಶಾಲೆಯ ಮಕ್ಕಳು ಆರೋಗ್ಯಕರ ವಾತಾವರಣದಲ್ಲಿ ಶಿಕ್ಷಣ ಕಲಿತು ವಿದ್ಯಾವಂvರಾಗಲು ಪ್ರೇರೇಪಿಸುತ್ತ ಬಂದಿದೆ.
೨೦೦೩ ರಲ್ಲಿ ಒಸಾಟ್ ಸಂಸ್ಥೆಯು ಪ್ರಾರಂಭಗೊAಡಿದ್ದು ಭಾರತ ದೇಶದ ವಿವಿಧೆಡೆಯಿಂದ ತೆರಳಿ ಅಮೇರಿಕದಲ್ಲಿ ಉದ್ಯೋಗ ಕಂಡುಕೊAಡಿರುವ ಅನೇಕ ಮಹಾನಿಯರು ತಮ್ಮ ತಾಯ್ನಾಡಿನ ಏಳಿಗೆಗಾಗಿ ಏನಾದರೂ ಮಾಡಲೇಬೇಕೆಂಬ ತುಡಿತದಿಂದ ಭಾರತದಲ್ಲಿ ಶಿಕ್ಷಣ ಪಡೆದು ಅಮೇರಿಕಕ್ಕೆ ತೆರಳಿ ಯಶಸ್ಸನ್ನು ಕಂಡ ಪ್ರತಿಭಾವಂತರು ಭಾರತ ದೇಶದ ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುವ ಮೂಲಕ ತಮ್ಮ ಹಣವನ್ನು ದೇಣಿಗೆ ರೂಪದಲ್ಲಿ ನೀಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣವನ್ನು ನೀಡುವ ಪ್ರಯತ್ನ ನಡೆಸಿದೆ.