ಮಡಿಕೇರಿ, ಜ.೨೨: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ಅವರು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಯ ಮುಖ್ಯ ರಸ್ತೆಯಲ್ಲಿ, ಮೇಕೇರಿಯಿಂದ ಯಂ. ಬಾಡಗ ಗ್ರಾಮದವರೆಗೆ ಹಾಗೂ ಮೂರ್ನಾಡುವಿನಿಂದ ಬಲಮುರಿ ರಸ್ತೆಯ ಮರು ಡಾಂಬರಿಕರಣಕ್ಕಾಗಿ ರೂ. ಆರು ಕೋಟಿ ತೊಂಬತ್ತೆAಟು ಲಕ್ಷದ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು. ಅಲ್ಲದೆ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆರು ಗ್ರಾಮಗಳಲ್ಲಿ ಹದಿಮೂರು ರಸ್ತೆ ಮತ್ತು ಮೋರಿಗಳು ಹಾಗೂ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗೆ ಒಟ್ಟು ರೂ ಒಂದು ಕೋಟಿ ಒಂದು ಲಕ್ಷದ ಅರವತ್ಮೂರು ಸಾವಿರದ ಕಾಮಗಾರಿಗಳ ಭೂಮಿ ಪೂಜೆಯನ್ನು ಶಾಸಕರು ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ PWಆ ಮತ್ತು Pಖಆ ಇಲಾಖಾಧಿಕಾರಿಗಳು, ತಾಂತ್ರಿಕ ವರ್ಗದವರು, ಕಾಂತೂರು ಮೂರ್ನಾಡು ಗ್ರಾ.ಪಂ.ಯ ಅಧ್ಯಕ್ಷರಾದ ಸುಜಾತ ಚಂದ್ರಶೇಖರ್, ಉಪಾಧ್ಯಕ್ಷರಾದ ಮುಂಡAಡ ವಿಜಯಲಕ್ಷಿö್ಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಮೌಳಿ, ಯಂ ಬಾಡಗ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರುಗಳಾದ ಎ.ಪಿ. ದೇವಯ್ಯ, ಯಶ್ವಿನ್ ಪೊನ್ನಪ್ಪ, ಕೋಡಂಬೂರು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಮೂಡೆರ ಅಶೋಕ್ ಅಯ್ಯಪ್ಪ, ಐಕೊಳ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಮುಂಡAಡ ಪವಿ ಸೋಮಣ್ಣ, ಮುತ್ತಾರ್ಮುಡಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪಾರೆಮಜಲು ರೀತಾ ಸುದರ್ಶನ್, ದಿನೇಶ್ ಶಂಕಪ್ಪ, ಮೂರ್ನಾಡು ಪಟ್ಟಣದ ಸದಸ್ಯರುಗಳಾದ ಪುಷ್ಪಾ, ಹೆಚ್. ರಘು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಪಳಂಗAಡ ಅಪ್ಪಣ, ಶಕ್ತಿ ಕೇಂದ್ರ ಒಂದರ ಪ್ರಮುಖ್ ರವಿ, ಶಕ್ತಿ ಕೇಂದ್ರ ಎರಡರ ಪ್ರಮುಖ್ ಕೈಪಟ್ಟಿರ ಹರೀಶ್ ಅಯ್ಯಪ್ಪ, ಪಕ್ಷದ ಹಿರಿಯರಾದ ಪುದಿಯೊಕ್ಕಡ ಬೆಲ್ಲು ಸೋಮಯ್ಯ, ಬೂತ್ ಸಮಿತಿಯ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರುಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.