ಪೊನ್ನಂಪೇಟೆ, ಜ.೨೨: ಆಲೂರು ಸಿದ್ದಾಪುರ ಗ್ರಾಮದ ಮಂದೆಯAಡ ಮೇಘನ ವನಿತ್ ಕುಮಾರ್ ರವರಿಗೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿಯನ್ನು ನೀಡಿದೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಪ್ರಾಧ್ಯಾಪಕರು ಹಾಗೂ ಸಂಶೋಧಕರಾಗಿರುವ ಪ್ರೊ. ವಿಕ್ರಮ್ ರಾಜ್ ಅರಸ್ ಅವರ ಮಾರ್ಗದರ್ಶನದಲ್ಲಿ "ಂಡಿಛಿheಣಥಿಠಿಚಿಟ ತಿomeಟಿ ಛಿhಚಿಡಿಚಿಛಿಣeಡಿs iಟಿ ಣhe seಟeಛಿಣ ಠಿಟಚಿಥಿs oಜಿ ಉiಡಿish ಞಚಿಡಿಟಿಚಿಜ" ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಮೇಘನ ರವರಿಗೆ ಪಿ.ಹೆಚ್.ಡಿ ಪದವಿ ಲಭಿಸಿದೆ. ವಿದ್ಯಾರ್ಥಿಯಾಗಿದ್ದಾಗ ಮೈಸೂರು ವಿಶ್ವವಿದ್ಯಾನಿಲಯದ ೫ ಚಿನ್ನದ ಪದಕವನ್ನು ಪಡೆದಿದ್ದರು. ಪ್ರಸ್ತುತ ಹಾಸನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಗಂಧದಕೋಟೆ ಇಲ್ಲಿನ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಸುತ್ತಿದ್ದಾರೆ.