ಗುಡ್ಡೆಹೊಸೂರು, ಜ. ೨೨ : ಇಲ್ಲಿನ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಂದಿನಿ ಅವರ ಅಧ್ಯಕ್ಷತೆಯಲ್ಲಿ ಸಮುದಾಯ ಭವನದಲ್ಲಿ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಯಶೋಧ ಮತ್ತು ಸದಸ್ಯರು ಹಾಜರಿದ್ದರು. ಪಿ.ಡಿ.ಓ ಶ್ಯಾಂ ತಮ್ಮಯ್ಯ ಗ್ರಾಮ ಪಂಚಾಯಿತಿ ವತಿಯಿಂದ ನಡೆಯುವ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ನೋಡಲ್ ಅಧಿಕಾರಿಯಾಗಿ ತೋಟಗಾರಿಕಾ ಇಲಾಖಾಧಿಕಾರಿ ಕಾವ್ಯ ಉಪಸ್ಥಿತರಿದ್ದು, ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಗುಡ್ಡೆಹೊಸೂರಿನಲ್ಲಿ ಸಾರ್ವಜನಿಕರ ಶೌಚಾಲಯವಿಲ್ಲದಿರುವ ಬಗ್ಗೆ ನಂಗಾರು ಜಗ್ಗ ಪ್ರಸ್ತಾಪಿಸಿದರು. ಶಾಲಾ ಮುಂಭಾಗದಲ್ಲಿ ಯಾರಿಗೂ ಪ್ರಯೋಜನವಿಲ್ಲದ ಬಸ್ ತಂಗುದಾಣವನ್ನು ಸಾರ್ವಜನಿಕ ಶೌಚಾಲಯವಾಗಿ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು. ಇದಕ್ಕೆ ಎಸ್.ಡಿ.ಎಂ.ಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸಾರ್ವಜನಿಕರು ಕಾವೇರಿ ನದಿಗೆ ತೆರಳುವ ದಾರಿಗೆ ಸ್ಥಳೀಯರೊಬ್ಬರು ಬೇಲಿ ನಿರ್ಮಿಸಿರುವ ಬಗ್ಗೆ ಬಿ.ಎಸ್. ಧನಪಾಲ್ ಸಭೆಯ ಗಮನಕ್ಕೆ ತಂದರು. ಗೌಡ ಸಂಘದವರು ಸಾರ್ವಜನಿಕರ ಉಪಯೋಗಕ್ಕಾಗಿ ನೆಲ ಸಮತಟ್ಟು ಮಾಡಿದರು. ಸಭೆಯಲ್ಲಿ ವಿವಿಧ ಶಾಲಾ ಮುಖ್ಯ ಶಿಕ್ಷಕರು ಅಂಗನವಾಡಿ ಕಾರ್ಯ ಕರ್ತರು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಭೆಗೆ ಹಲವು ಪ್ರಮುಖ ಅಧಿಕಾರಿಗಳು ಬಾರದೆ ಇರುವ ಬಗ್ಗೆ ಗ್ರಾಮಸ್ಥರು ನಂಗಾರು ಜಗ್ಗ ಪ್ರಸ್ತಾಪಿಸಿದರು. ಶಾಲಾ ಮುಂಭಾಗದಲ್ಲಿ ಯಾರಿಗೂ ಪ್ರಯೋಜನವಿಲ್ಲದ ಬಸ್ ತಂಗುದಾಣವನ್ನು ಸಾರ್ವಜನಿಕ ಶೌಚಾಲಯವಾಗಿ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು. ಇದಕ್ಕೆ ಎಸ್.ಡಿ.ಎಂ.ಸಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸಾರ್ವಜನಿಕರು ಕಾವೇರಿ ನದಿಗೆ ತೆರಳುವ ದಾರಿಗೆ ಸ್ಥಳೀಯರೊಬ್ಬರು ಬೇಲಿ ನಿರ್ಮಿಸಿರುವ ಬಗ್ಗೆ ಬಿ.ಎಸ್. ಧನಪಾಲ್ ಸಭೆಯ ಗಮನಕ್ಕೆ ತಂದರು. ಗೌಡ ಸಂಘದವರು ಸಾರ್ವಜನಿಕರ ಉಪಯೋಗಕ್ಕಾಗಿ ನೆಲ ಸಮತಟ್ಟು ಮಾಡಿದರು. ಸಭೆಯಲ್ಲಿ ವಿವಿಧ ಶಾಲಾ ಮುಖ್ಯ ಶಿಕ್ಷಕರು ಅಂಗನವಾಡಿ ಕಾರ್ಯ ಕರ್ತರು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಭೆಗೆ ಹಲವು ಪ್ರಮುಖ ಅಧಿಕಾರಿಗಳು ಬಾರದೆ ಇರುವ ಬಗ್ಗೆ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಹಲವು ಮಂದಿ ವಾಸದ ಮನೆಯನ್ನು ಕೋರಿ ಸಭೆಯಲ್ಲಿ ಅರ್ಜಿ ಸಲ್ಲಿಸಿದರು.
- ಗಣೇಶ್ ಕುಡೆಕ್ಕಲ್