ಸೋಮವಾರಪೇಟೆ, ಜ. ೨೨: ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ವಾರದ ಸಂತೆಯನ್ನು ಆಲೇಕಟ್ಟೆರಸ್ತೆಯ ಆರ್‌ಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಿ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಪಟ್ಟಣ ಪಂಚಾಯಿತಿ ಹಿಂಪಡೆದಿದ್ದು, ವರ್ತಕರು, ಸಾರ್ವಜನಿಕರ ಒತ್ತಾಯದ ಮೇರೆಗೆ ಪಟ್ಟಣದ ಹೈಟೆಕ್ ಮಾರುಕಟ್ಟೆಯಲ್ಲಿಯೇ ಸಂತೆ ನಡೆಸಲು ನಿರ್ಧರಿಸಿದೆ.

ಶಾಸಕ ಅಪ್ಪಚ್ಚುರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ತಾಲೂಕು ಮಟ್ಟದ ಟಾಸ್ಕ್ಫೋರ್ಸ್ ಸಭೆಯಲ್ಲಿಯೂ ಸಂತೆಯ ಬಗ್ಗೆ ಚರ್ಚೆ ನಡೆದು, ಆರ್‌ಎಂಸಿಗೆ ಸ್ಥಳಾಂತರಿಸುವAತೆ ತೀರ್ಮಾನಿಸಲಾಗಿತ್ತು. ನಂತರ ಪ.ಪಂ. ಟಾಸ್ಕ್ ಫೋರ್ಸ್ ಸಭೆಯಲ್ಲೂ ಇದೇ ತೀರ್ಮಾನ ಕೈಗೊಳ್ಳಲಾಗಿತ್ತು.