ಸೋಮವಾರಪೇಟೆ, ಜ. ೨೨: ತಾಲೂಕು ಕೃಷಿ ಇಲಾಖೆ ವತಿಯಿಂದ ರೈತರಿಗೆ ಸಹಾಯಧನ ಯೋಜನೆಯಡಿ ಕೃಷಿ ಯಂತ್ರೋ ಪಕರಣಗಳಾದ ಪವರ್ ಟಿಲ್ಲರ್, ವೀಡ್ ಕಟ್ಟರ್, ರೋಟವೇಟರ್, ಡೀಸಲ್ ಪಂಪ್ಸೆಟ್, ಪವರ್ ಸ್ಪೆçÃಯರ್ ಹಾಗೂ ತುಂತುರು ನೀರಾವರಿ ಘಟಕಗಳನ್ನು ವಿತರಿಸಲಾಗುತ್ತಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಆಸಕ್ತ ರೈತರು ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ.