ಶ್ರೀಮಂಗಲ, ಜ. ೨೨: ಪ್ರತಿಯೊಬ್ಬ ಕಾಫಿ ಬೆಳೆಗಾರರು ತಮ್ಮ ಕಾಫಿ ತೋಟದ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ವಿಜ್ಞಾನಿಗಳ ಸಲಹೆಯಂತೆ ಸರಿಯಾದ ಪ್ರಮಾಣದಲ್ಲಿ ಸೂಕ್ತ ಗೊಬ್ಬರವನ್ನು ಬಳಸಬೇಕು ಎಂದು ಕಾಫಿ ಮಂಡಳಿ ಸದಸ್ಯ ಮಚ್ಚಮಾಡ ಡಾಲಿ ಚಂಗಪ್ಪ ಅವರು ಹೇಳಿದರು.
ಶ್ರೀಮಂಗಲ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗೋಣಿಕೊಪ್ಪ ವಿಭಾಗದ ಭಾರತೀಯ ಕಾಫಿ ಮಂಡಳಿ ವತಿಯಿಂದ ನಡೆದ ಕಾಫಿ ತೋಟದ ಮಣ್ಣು ಆರೋಗ್ಯ ಮೌಲ್ಯಮಾಪನ ಮತ್ತು ಮಣ್ಣು ಪರೀಕ್ಷೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿ ದರು. ಗೋಣಿಕೊಪ್ಪ ಕಾಫಿ ಮಂಡಳಿ ಯಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲ ಯವನ್ನು ಸ್ಥಾಪಿಸಲಾ ಗಿದ್ದು, ಈ ಸೇವೆಯನ್ನು ಎಲ್ಲಾ ಕಾಫಿ ಬೆಳೆಗಾರರು ಬಳಸಿಕೊಳ್ಳಿ ಎಂದು ಕಾಫಿ ಮಂಡಳಿಯ ಉಪನಿರ್ದೇಶಕಿ ಡಾ. ಶ್ರೀದೇವಿ ಹೇಳಿದರು.ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷ ಅಜ್ಜಮಾಡ ಸಿ. ಜಯ ಮಾತನಾಡಿ, ಗೋಣಿಕೊಪ್ಪದ ಕಾಫಿ ಮಂಡಳಿಯಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯ ವನ್ನು ಸ್ಥಾಪಿಸಿದ್ದಕ್ಕಾಗಿ ಕಾಫಿ ಮಂಡಳಿಯ ಅತ್ಯುತ್ತಮ ನಿರ್ಧಾರ ವಾಗಿದ್ದು, ಇದು ದಕ್ಷಿಣ ಕೊಡಗಿನ ಕಾಫಿ ಬೆಳೆಗಾರರಿಗೆ ಸಹಕಾರಿ ಯಾಗಲಿದೆ ಎಂದರು. ನಿವೃತ ಅರಣ್ಯಾಧಿಕಾರಿ ಕೋಟ್ರಂಗಡ ಚಿಣ್ಣಪ್ಪ ಮಾತನಾಡಿ, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಲ್ಲಿ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಾಫಿ ಬೆಳೆಗಾರರ ಪ್ರಧಾನ ಕರ್ತವ್ಯವಾಗಿದೆ ಎಂದರು.
ಕಾಫಿ ಮಂಡಳಿಯ ಅಧಿಕಾರಿ ಡಾ. ಎಸ್.ಎ. ನದಾಫ್ ಮಾತನಾಡಿ, ರಾಸಾಯನಿಕ ಗೊಬ್ಬರಗಳ ಅಸಮಾತೋಲನದ ಬಳಕೆಯು ಕಾಫಿ ಮಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಆದ್ದರಿಂದ ಕಾಫಿ ಮಂಡಳಿಯ ಮಣ್ಣು ಪರೀಕ್ಷೆಯ ಶಿಫಾರಸ್ಸಿನಂತೆ ಗೊಬ್ಬರವನ್ನು ಬಳಸಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀಮಂಗಲ ವಿಭಾಗದ ಕಾಫಿ ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ಸುನೀಲ್ ಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ಚೋಕಿರ ಕಲ್ಪನಾ ಉಪಸ್ಥಿತರಿದ್ದರು.