ಸೋಮವಾರಪೇಟೆ, ಜ. ೨೦: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನೊಂದ ಮಹಿಳೆಯರ ಸಹಾಯಕ್ಕಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆ ಸಮೀಪ ಓಡಿಪಿ ಮಹಿಳಾ ಸಾಂತ್ವನ ಕೇಂದ್ರ ತೆರೆಯಲಾಗಿದ್ದು, ದಿನದ ೨೪ ಗಂಟೆಯೂ ಸಹಾಯ ಲಭ್ಯವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಈ ಹಿಂದೆ ಕುಶಾಲನಗರದ ಗುಮ್ಮನಕೊಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರವನ್ನು ಸೋಮವಾರಪೇಟೆಗೆ ಸ್ಥಳಾಂತರಿಸಲಾಗಿದ್ದು, ಮಹಿಳೆಯರು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಸಹಾಯವಾಣಿ ಸಂಖ್ಯೆ ೧೦೯೧, ೧೮೧ ಅಥವಾ ದೂರವಾಣಿ ೦೮೨೭೬ ೨೮೨೧೯೫ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.
ಮಹಿಳೆಯರು ಪ್ರಮುಖವಾಗಿ ಎದುರಿಸುವ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಲಹ, ಗಂಡನಿAದ ಹಿಂಸೆ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಕೆಲಸದ ಸ್ಥಳದಲ್ಲಿ ಕಿರುಕುಳಗಳು ಇದ್ದಲ್ಲಿ ಮಾಹಿತಿ ನೀಡಿ ನ್ಯಾಯ ಪಡೆಯಬಹುದಾಗಿದೆ. ಇದರೊಂದಿಗೆ ಆತ್ಮಹತ್ಯೆಯ ಮನಸ್ಥಿತಿ ಇದ್ದವರಿಗೆ ಆಪ್ತಸಮಾಲೋಚನೆ, ದೌರ್ಜನ್ಯಕ್ಕೊಳಗಾದವರಿಗೆ ತಾತ್ಕಾಲಿಕ ವಸತಿ, ಉಚಿತ ಕಾನೂನು ನೆರವು ಒದಗಿಸಲಾಗುವುದು. ಇದರೊಂದಿಗೆ ಸರ್ಕಾರದಿಂದ ಲಭ್ಯವಾಗುವ ಇತರ ಸೇವೆ-ಸವಲತ್ತುಗಳನ್ನು ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪಟ್ಟಣದ ಸರ್ಕಾರಿ ಆಸ್ಪತ್ರೆ ಸಮೀಪವಿರುವ ಓಡಿಪಿ ಸಾಂತ್ವನÀ ಸಲಹಾ ಕೇಂದ್ರದ ಕಚೇರಿಗೆ ಖುದ್ದು ಭೇಟಿ ನೀಡಿ ದೂರು ಸಲ್ಲಿಸಬಹುದಾಗಿದೆ.