ಕಡಂಗ, ಜ. ೨೧: ವೀರಾಜಪೇಟೆಯಿಂದ ಕಡಂಗಮರೂರು (ಕೆದಮಳ್ಳೂರು) ಮುಖಾಂತರ ಹಾದು ಹೋಗುವ ರಸ್ತೆ ಕಳೆದ ಹತ್ತು ವರ್ಷಗಳಿಂದ ಹದಗೆಟ್ಟು ಹೋಗಿದೆ. ವಾಹನ ಇರಲಿ, ನಡೆದಾಡಲು ಕೂಡ ಸಾಹಸ ಪಡಬೇಕು. ಎದುರು ಬದುರಾಗಿ ವಾಹನ ಬಂತೆAದರೆ ಹೊಡೆದಾಡುವ ಮಟ್ಟಕ್ಕೆ ಜಗಳ ತಾರಕಕ್ಕೇರುತ್ತದೆ.

ಇಲ್ಲಿಯ ಜನರು ಹಲವು ಬಾರಿ ಸರ್ಕಾರಕ್ಕೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

ಅಸಹಾಯಕರಾದ ಗ್ರಾಮದ ಯುವಕರಾದ ಬೋಪಣ್ಣ, ಗಗನ್, ತಾರಕ್, ಅಪ್ಪಚ್ಚು, ಮನೀಶ್, ದೀಕ್ಷಿತ್, ಜಕ್ರಿ, ಆದ್ರುಮಾನ್, ಪೂಣಚ್ಚ, ಅಗಸ್ತö್ಯ ನಿಖಿಲ್, ದರ್ಶನ್, ರಮಿತ್ ಸೇರಿದಂತೆ ಸ್ಥಳೀಯ ಯುವಕರು ಹಾರೆ, ಗುದ್ದಲಿ, ಪಿಕಾಶಿ ಹಿಡಿದು ಮಣ್ಣು ಹಾಕಿ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿಪಡಿಸಿದ್ದಾರೆ.

ಇನ್ನಾದರೂ ಸಂಬAಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ತಮ್ಮ ಗಮನಹರಿಸಲಿ ಎಂಬುದು ಗ್ರಾಮಸ್ಥರ ಆಗ್ರಹ.

- ನೌಫಲ್ ಕಡಂಗ