ಕಣಿವೆ, ಜ. ೨೧: ಇಲ್ಲಿನ ಸಿದ್ಧಗಂಗಾ ಶ್ರೀ ಭಕ್ತ ಮಂಡಳಿ ಹಾಗೂ ವಿವೇಕಾನಂದ ಎಜುಕೇಷನ್ ಟ್ರಸ್ಟ್ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಾಸೋಹ ದಿನಾಚರಣೆಯನ್ನು ಡಾ. ಶ್ರೀ ಶಿವಕುಮಾರಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇಡೀ ನಾಡಿಗೆ ಸಿದ್ಧಗಂಗಾ ಶ್ರೀಗಳ ಪುಣ್ಯಕ್ಷೇತ್ರ ಬೆಳಕಾಗಿದೆ. ಮಠದಲ್ಲಿ ಜಾತಿ ಮತಗಳ ಬೇಧವಿಲ್ಲದೇ ಹತ್ತಾರು ಸಾವಿರ ಮಕ್ಕಳಿಗೆ ಅಕ್ಷರ, ಆಶ್ರಯ ಹಾಗೂ ದಾಸೋಹ ನೀಡುವುದು ಸಾಮಾನ್ಯ ಸಂಗತಿಯಲ್ಲ. ಮಠದಲ್ಲಿ ನೂರಾರು ವರ್ಷಗಳ ಹಿಂದೆ ಹಚ್ಚಿದ ಒಲೆಯ ಬೆಂಕಿ ಆರದೇ ಇನ್ನೂ ಕೂಡ ಇರುವುದೇ ಇದಕ್ಕೆ ಸಾಕ್ಷಿ ಎಂದು ಅವರು ಬಣ್ಣಿಸಿದರು.

ಲಿಂಗೈಕ್ಯರಾಗಿರುವ ಶ್ರೀಗಳು ಶತಾಯುಷಿಗಳಾಗಿದ್ದರೂ ಕೂಡ ಕನ್ನಡಕ ಬಳಸದೇ ಅಕ್ಷರಗಳನ್ನು ಓದುತ್ತಿದ್ದ ಬಗ್ಗೆ ಪ್ರಸ್ತಾಪಿಸಿದರು. ವಿದ್ಯಾರ್ಥಿಗಳು ಗುರು ಹಿರಿಯರಿಗೆ ಹಾಗೂ ಪೋಷಕರಿಗೆ ಒಳ್ಳೆಯ ಹೆಸರು ತರುವಂತಹ ರೀತಿ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬೇಕು ಎಂದು ಕರೆಕೊಟ್ಟರು.

ಸಿದ್ಧಗಂಗಾ ಶ್ರೀ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್. ಮೂರ್ತಿ ಪ್ರಾಸ್ತವಿಕ ವಾಗಿ ಮಾತನಾಡಿ, ನಡೆದಾಡುವ ಶ್ರೀಗಳು ಬದುಕಿದ್ದ ಅವಧಿಯಲ್ಲಿ ನಾಡು ಬಹಳ ಸುಭೀಕ್ಷವಾಗಿತ್ತು. ಶ್ರೀಗಳು ಶಿವೈಕ್ಯರಾದ ಬಳಿಕ ನಾಡಿನಲ್ಲಿ ಜಲ ಪ್ರವಾಹ, ನೆರೆ ಹಾಗೂ ಕೊರೊನಾದಂತಹ ಸಾಂಕ್ರಾಮಿಕ ರೋಗಗಳು ಬಾಧಿಸುತ್ತಿವೆ.ಆದಾಗ್ಯೂ ರಾಜ್ಯ ಸರ್ಕಾರ ಶ್ರೀಗಳ ಜೀವಿತಾವಧಿಯ ಸಾಧನೆಯನ್ನು ಗೌರವಿಸಿ ದಾಸೋಹ ದಿನವಾಗಿ ಘೋಷಿಸಿರುವುದು ಹೆಮ್ಮೆಯ ಸಂಗತಿ ಎಂದರು.

ವಿವೇಕಾನAದ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎನ್.ಎನ್. ಶಂಭುಲಿAಗಪ್ಪ ಅಧ್ಯಕ್ಷತೆ ವಹಿಸಿದ್ದರು. ಮಹಾತ್ಮಗಾಂಧಿ ಪದವಿ ಕಾಲೇಜಿನ ಪ್ರಾಂಶುಪಾಲೆ ಟಿ.ಎ. ಲಿಖಿತ, ವಿವೇಕಾನಂದ ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ, ಉಪನ್ಯಾಸಕರಾದ ಸ್ವಾಮಿಗೌಡ, ಚಂದ್ರಶೇಖರ್, ವಿಕ್ರಂ, ಮಂಜೇಶ್ ಹಾಗೂ ಇತರರು ಇದ್ದರು. ಬಳಿಕ ಕಾಲೇಜು ವಿದ್ಯಾರ್ಥಿಗಳು ಹಾಗೂ ಭಾಗವಹಿಸಿದ್ದವರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಕುಶಾಲನಗರ

ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಮರಣೆಯನ್ನು ಕುಶಾಲನಗರ ವ್ಯಾಪ್ತಿಯಲ್ಲಿ ದಾಸೋಹ ದಿನವಾಗಿ ಆಚರಿಸಲಾಯಿತು.

ವೀರಶೈವ ಲಿಂಗಾಯತ ಯುವ ವೇದಿಕೆ ಆಶ್ರಯದಲ್ಲಿ

(ಮೊದಲ ಪುಟದಿಂದ) ಶಿರಂಗಾಲದಿAದ ಕುಶಾಲನಗರ ತನಕ ಶ್ರೀ ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರವಿರುವ ಬೆಳ್ಳಿ ರಥದ ಮೆರವಣಿಗೆ ಹಾಗೂ ದಾಸೋಹ, ವೀರಗಾಸೆ ಮತ್ತಿತರ ಕಾರ್ಯಕ್ರಮಗಳ ಮೂಲಕ ಸ್ವಾಮೀಜಿಗಳ ಸ್ಮರಣೆ ಮಾಡಲಾಯಿತು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ದಿವ್ಯಸಾನ್ನಿಧ್ಯದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ಶಿರಂಗಾಲ ಷಡಕ್ಷರ ಮತ್ತು ಮರೂರು ಭರತ್ ಅವರ ಮುಂದಾಳತ್ವದಲ್ಲಿ ಶಿರಂಗಾಲದಿAದ ಕುಶಾಲನಗರ ಮೂಲಕ ಗುಡ್ಡೆಹೊಸೂರು ವರೆಗೆ ಮೆರವಣಿಗೆ ತೆರಳಿ ಸುಮಾರು ೫೦೦೦ಕ್ಕೂ ಅಧಿಕ ಜನರಿಗೆ ದಾಸೋಹ ನೆರವೇರಿಸಲಾಯಿತು.

ಬೆಳಗ್ಗೆ ಶಿರಂಗಾಲದ ಶ್ರೀ ಮಂಟಿಗಮ್ಮ ತಾಯಿ ಗದ್ದುಗೆಯಿಂದ ಹೊರಟ ಶ್ರೀಗಳ ಭಾವಚಿತ್ರವಿರುವ ಬೆಳ್ಳಿರಥ ತೊರೆನೂರು, ಹೆಬ್ಬಾಲೆ, ಕೂಡಿಗೆ, ಕುಶಾಲನಗರ ಮಾರ್ಗವಾಗಿ ಜಿಲ್ಲೆಯ ಗಡಿ ಭಾಗದ ಕಾವೇರಿ ಪ್ರತಿಮೆ ತನಕ ತೆರಳಿ ಅಲ್ಲಿ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು ನಂತರ ಕುಶಾಲನಗರ ಪಟ್ಟಣ ಮೂಲಕ ಗುಡ್ಡೆಹೊಸೂರು ತನಕ ರಥ ತೆರಳಿತು.

ಈ ಸಂದರ್ಭ ದಾರಿ ಮಧ್ಯೆ ಇರುವ ಎಲ್ಲಾ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವೇದಿಕೆ ವತಿಯಿಂದ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಮಾತನಾಡಿದ ಶ್ರೀ ಸದಾಶಿವ ಸ್ವಾಮೀಜಿ, ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀ ಶಿವಕುಮಾರ ಸ್ವಾಮಿಗಳು ಲಿಂಗೈಕ್ಯ ರಾಗಿ ಮೂರು ವರ್ಷಗಳು ಸಂದಿದ್ದು ಶ್ರೀಗಳ ಸ್ಮರಣಾರ್ಥವಾಗಿ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಕುಶಾಲನಗರ ರಥಬೀದಿಯ ಬಸವೇಶ್ವರ

ದೇವಾಲಯದಲ್ಲಿ ಕೊಡಗು ಜಿಲ್ಲಾ ವೀರಶೈವ ಜಿಲ್ಲಾಧ್ಯಕ್ಷರಾದ ಹೆಚ್.ವಿ ಶಿವಪ್ಪ ನೇತೃತ್ವದಲ್ಲಿ ಸಾಂಪ್ರದಾಯಿಕ ವಾಗಿ ರಥವನ್ನು ಬರಮಾಡಿಕೊಂಡು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಥದ ಮೆರವಣಿಗೆ ನಡುವೆ ವೀರಗಾಸೆ ಕುಣಿತ ನಡೆಯಿತು.

ಈ ಸಂದರ್ಭ ವೇದಿಕೆಯ ಜಿಲ್ಲಾ ಮತ್ತು ತಾಲೂಕು ಘಟಕದ ಪ್ರಮುಖರಾದ ಕೆ.ಡಿ ಪ್ರಶಾಂತ್, ನವೀನ್ ಕುಮಾರ್, ಚಿತ್ರ ಕುಮಾರ್, ಚೇತನ್, ಆದರ್ಶ್, ಶ್ರೀಕಾಂತ್ ಸೇರಿದಂತೆ ವೇದಿಕೆಯ ಪ್ರಮುಖರು ಇದ್ದರು.

ಲಕ್ಷಾಂತರ ವಿದ್ಯಾರ್ಥಿಗಳ ಜೀವನಕ್ಕೆ ಬೆಳಕಾಗಿ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣಾವಕಾಶ ಕಲ್ಪಿಸಿ, ಅನಾಥ ಮಕ್ಕಳ ಪಾಲಿಗೆ ಕಲ್ಪವೃಕ್ಷವಾಗಿದ್ದ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿಯವರ ೩ನೇ ವರ್ಷದ ಪುಣ್ಯಸ್ಮರಣೆಯನ್ನು ದಾಸೋಹ ದಿನವನ್ನಾಗಿ ಆಚರಿಸುತ್ತಿರುವುದು ಮಹತ್ವದ ಕಾಯಕವೆನಿಸುತ್ತದೆ ಎಂದು ಕಲ್ಲುಮಠಾಧೀಶ ಮಹಾಂತಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆಯ ಕಲ್ಲುಮಠದ ಎಸ್.ಎ.ಎಸ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ತೃತೀಯ ಪುಣ್ಯಸ್ಮರಣೆಯ ದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಕಾಯಕವೇ ಕೈಲಾಸ ತತ್ವವನ್ನು ಜೀವನದಲ್ಲಿ ರೂಢಿಸಿಕೊಂಡಿದ್ದ ಮಹಾ ಸ್ವಾಮೀಜಿಯವರು ಭೌತಿಕವಾಗಿ ಕಣ್ಮರೆಯಾಗಿದ್ದರೂ, ಅವರ ದಾಸೋಹ ಚಿಂತನೆ, ಸಾಮಾಜಿಕ ಕಳಕಳಿ, ಕಾಯಕ ಇತ್ಯಾದಿ ಆದರ್ಶ ಗುಣಗಳು ನಿತ್ಯಸ್ಮರಣೀಯವಾಗಿವೆ ಎಂದರು.

ಸಹಶಿಕ್ಷಕ ಬಿ.ಎಚ್. ತಿಮ್ಮಯ್ಯ ಮಾತನಾಡಿದರು. ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಬಿ.ಎಸ್. ಪ್ರದೀಪ್, ಮುಖ್ಯ ಶಿಕ್ಷಕ ಎಚ್.ಎಂ. ಅಭಿಲಾಷ್, ಸಹಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.