ಚೆಟ್ಟಳ್ಳಿ, ಜ. ೨೧: ಚೆಟ್ಟಳ್ಳಿ ಸಮೀಪದ ಅಬ್ಯಾಲದಲ್ಲಿ ನಿರ್ಮಿಸಲಾಗುತ್ತಿರುವ ಕಾಂಕ್ರೀಟ್ ತಡೆಗೋಡೆ ಕುಸಿತದ ಹಿನ್ನೆಲೆ ಚೆಟ್ಟಳ್ಳಿಯ ಗ್ರಾಮಸ್ಥರು ಹಾಗೂ ವಾಹನ ಚಾಲಕರು ಘಟನಾ ಸ್ಥಳಕ್ಕೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಕಳೆದ ಎರಡು ವರ್ಷಗಳ ಹಿಂದೆ ಭಾರೀ ಮಳೆಗೆ ಚೆಟ್ಟಳ್ಳಿ- ಕತ್ತಲೆಕಾಡು ನಡುವೆ ಭೂಕುಸಿತ ಉಂಟಾಗಿ ರಸ್ತೆಗಳು ಅಪಾಯದ ಮಟ್ಟ ತಲುಪಿತ್ತು. ಲೋಕೋಪಯೋಗಿ ಇಲಾಖೆ ಟೆಂಡರ್ ನೀಡುವ ಮೂಲಕ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವಹಿಸಿತ್ತು. ಕಳೆದ ಮಳೆಗಾಲದಿಂದ ಕಾಂಕ್ರೀಟ್ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿತ್ತು. ಸ್ಥಳೀಯರು ಹಾಗೂ ಸುತ್ತಲಿನ ತೋಟದ ಮಾಲೀಕರು ಕಳಪೆ ಗುಣಮಟ್ಟದ ಅವೈಜ್ಞಾನಿಕ ತಡೆಗೋಡೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದರೂ ಕಾಮಗಾರಿ ನಡೆಯುತ್ತಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಿ ಎರಡು ದಿನಗಳ ನಂತರ ಮಣ್ಣನ್ನು ಸುರಿಯುತ್ತಿದ್ದ ಸಂದರ್ಭ ತಡೆಗೋಡೆ ಕುಸಿದು ವಿನ್ಸಿ ಅಪ್ಪಯ್ಯ ಎಂಬವರ ಕಾಫಿ ತೋಟಕ್ಕೆ ಬಾರೀ ನಷ್ಟ ಉಂಟಾಗಿತ್ತು.
ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
(ಮೊದಲ ಪುಟದಿಂದ) ಶುಕ್ರವಾರ ಚೆಟ್ಟಳ್ಳಿ ಗ್ರಾಮಸ್ಥರು, ವಾಹನ ಚಾಲಕರು ಸೇರಿ ತಡೆಗೋಡೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತೀರ ಕಳಪೆ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲೆ ಇದ್ದ ಗುತ್ತಿಗೆದಾರನನ್ನು ಸ್ಥಳೀಯರು ವಿಚಾರಿಸಿದಾಗ ಕಾಮಗಾರಿ ಮಾಡಿದ್ದು, ನಾನಲ್ಲವೆಂದು ಹೇಳಿ ಸ್ಥಳೀಯರ ಆಕ್ರೋಶ ವ್ಯಕ್ತವಾಗುತ್ತಿ ದ್ದಂತೆ ಗುತ್ತಿಗೆದಾರ ಅಲ್ಲಿಂದ ತೆರಳಿದ್ದಾರೆ. ಗ್ರಾಮಸ್ಥರು ಕಾಂಕ್ರೀಟ್ ತಡೆ ಗೋಡೆಯ ಕಾಮಗಾರಿಯನ್ನು ಪರಿಶೀಲಿಸಿದಾಗ ಕಬ್ಬಿಣದ ಬಳಕೆ ಇಲ್ಲ, ಜೆಲ್ಲಿ ಇಲ್ಲ ಹಾಗೂ ಸಿಮೆಂಟಿನ ಸರಿಯಾದ ಮಿಶ್ರಣವಿಲ್ಲದೆ ಕಲ್ಲು (ಮೊದಲ ಪುಟದಿಂದ) ಶುಕ್ರವಾರ ಚೆಟ್ಟಳ್ಳಿ ಗ್ರಾಮಸ್ಥರು, ವಾಹನ ಚಾಲಕರು ಸೇರಿ ತಡೆಗೋಡೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತೀರ ಕಳಪೆ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲೆ ಇದ್ದ ಗುತ್ತಿಗೆದಾರನನ್ನು ಸ್ಥಳೀಯರು ವಿಚಾರಿಸಿದಾಗ ಕಾಮಗಾರಿ ಮಾಡಿದ್ದು, ನಾನಲ್ಲವೆಂದು ಹೇಳಿ ಸ್ಥಳೀಯರ ಆಕ್ರೋಶ ವ್ಯಕ್ತವಾಗುತ್ತಿ ದ್ದಂತೆ ಗುತ್ತಿಗೆದಾರ ಅಲ್ಲಿಂದ ತೆರಳಿದ್ದಾರೆ. ಗ್ರಾಮಸ್ಥರು ಕಾಂಕ್ರೀಟ್ ತಡೆ ಗೋಡೆಯ ಕಾಮಗಾರಿಯನ್ನು ಪರಿಶೀಲಿಸಿದಾಗ ಕಬ್ಬಿಣದ ಬಳಕೆ ಇಲ್ಲ, ಜೆಲ್ಲಿ ಇಲ್ಲ ಹಾಗೂ ಸಿಮೆಂಟಿನ ಸರಿಯಾದ ಮಿಶ್ರಣವಿಲ್ಲದೆ ಕಲ್ಲು ಕಾಮಗಾರಿಯಿಂದ ಭವಿಷ್ಯದಲ್ಲಿ ದೊಡ್ಡ ಅನಾಹುತ ಸಂಭವಿಸುತ್ತದೆ ಎಂದು ಸ್ಥಳೀಯರಾದ ಕೊಂಗೇಟಿರ ಬೋಪಯ್ಯ ಆರೋಪಿಸಿದರು. ಕಳೆದ ಬಾರಿಯ ಮಳೆಯಿಂದಾಗಿ ಇಲ್ಲಿನ ಬರೆಗಳು ಕುಸಿತಗೊಂಡಿವೆ. ೧೨ ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಗಟ್ಟಿಯಾಗಿ ಅಡಿಪಾಯವನ್ನು ಹಾಕದೆ ತಡೆ ಗೋಡೆಯನ್ನು ನಿರ್ಮಿಸಿದಲ್ಲದೆ, ತೀರ ಕಳಪೆ ಗುಣಮಟ್ಟದ ತಡೆಗೋಡೆ ನಿರ್ಮಿಸಿ ನಿರ್ಮಾಣದ ಹಂತದಲ್ಲೆ ಕುಸಿದಿದೆ. ಈ ಬಗ್ಗೆ ಕ್ರಮವಹಿಸುವಂತೆ ಪಪ್ಪು ತಿಮ್ಮಯ್ಯ ಆಗ್ರಹಿಸಿದರು.
ಕೆಲವು ದಿನಗಳಲ್ಲಿ ಸಂಬAಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳದಿದ್ದರೆ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು. ಈ ಸಂದರ್ಭ ಸ್ಥಳೀಯರಾದ ದಿಲೀಪ್ ಅಪ್ಪಚ್ಚು, ಬಿದ್ದಂಡ ಅಚ್ಚಯ್ಯ, ಪೇರಿಯನ ಜಯಾನಂದ, ಜಯಂತ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಧುಸೂಧನ್, ವಿಜಯ, ಅಜೀಜ್ ಹಾಗೂ ಸ್ಥಳೀಯರು ಹಾಜರಿದ್ದರು.
-ಕರುಣ್ ಕಾಳಯ್ಯ