ಶನಿವಾರಸಂತೆ, ಜ. ೨೦: ಸಮೀಪದ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಮುಂಬರುವ ಗಣರಾಜ್ಯೋತ್ಸವ ಅಂಗವಾಗಿ ಪ್ರಿಕೆಜಿ, ಎಲ್‌ಕೆಜಿ, ಯುಕೆಜಿ, ೧ ಮತ್ತು ೨ನೇ ತರಗತಿ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು.ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸೈನಿಕ, ಭಗತ್ ಸಿಂಗ್, ಹನುಮ, ರಾಮ, ಕೃಷ್ಣ, ಸ್ವಾಮಿ ವಿವೇಕಾನಂದರ ತಾಯಿ, ರಾಧೆ, ಕಾವೇರಿ, ಕಾಡುಮನುಷ್ಯ, ಕೊರವಂಜಿ ಇತ್ಯಾದಿ ವೇಷಗಳನ್ನು ಧರಿಸಿ ರಂಜಿಸಿದರು.

ಶಿಕ್ಷಕಿಯರಾದ ಸಂಗೀತಾ ಪಾಟೀಲ್, ಧನ್ಯ, ಪುರುಷೋತ್ತಮ್, ಸರಿತಾ ಕೃಷ್ಣಕುಮಾರ್, ಸುಮಾಸಾಯಿನಾಥ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಪ್ರಾಂಶುಪಾಲೆ ಸುಜಲಾದೇವಿ, ಇತರ ಶಿಕ್ಷಕರು ಹಾಜರಿದ್ದರು.