ಗೋಣಿಕೊಪ್ಪಲು, ಜ. ೨೦: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿರುವ ಸೆಸ್ಕ್ ಇಲಾಖೆಯು ಆಧುನಿಕ ಶೈಲಿಯಲ್ಲಿ ಮುಂದಿದ್ದರೂ ನಿಗದಿತ ಸಮಯದಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ.
ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿಗೆ ದಿನಪೂರ್ತಿ ವಿದ್ಯುತ್ ನಿಲುಗಡೆಗೊಳಿಸುವುದರಿಂದ ನಗರದ ವ್ಯಾಪಾರಸ್ಥರಿಗೆ ಹಾಗೂ ವಿದ್ಯುತ್ ಗ್ರಾಹಕರಿಗೆ ಲಕ್ಷಾಂತರ ಹಣ ನಷ್ಟ ಅನುಭವಿಸುವಂತಾಗಿದೆ.
ಚೆಸ್ಕಾA ಇಲಾಖೆಯ ವತಿಯಿಂದ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಆಗಿಂದಾಗ್ಗೆ ಇಲಾಖೆಯು ಕೋಟ್ಯಾಂತರ ಹಣವನ್ನು ವಿನಿಯೋಗ ಮಾಡುತ್ತಿದೆ. ಆದರೆ ಇದರಿಂದ ದೈನಂದಿನ ಚಟುವಟಿಕೆಗಳಿಗೆ ಅವಶ್ಯಕತೆ ಇರುವ ವಿದ್ಯುತ್ ಪಡೆಯಲು ಗ್ರಾಹಕನಿಗೆ ಇಲ್ಲಿಯ ತನಕ ಸಾಧ್ಯವಾಗುತ್ತಿಲ್ಲ.
ಗೋಣಿಕೊಪ್ಪದ ಚೆಸ್ಕಾಂ ಕಚೇರಿಯಿಂದ ಗೋಣಿಕೊಪ್ಪ ಸೇರಿದಂತೆ ಹಾತೂರು, ತಿತಿಮತಿ, ಹೊಸೂರು, ಬಲ್ಯಮುಂಡೂರು, ಕಿರುಗೂರು ಹಾಗೂ ಪೊನ್ನಂಪೇಟೆ ಭಾಗಕ್ಕೆ ವಿದ್ಯುತ್ ಪೂರೈಕೆಯಾಗುತ್ತಿದೆ.
ಪ್ರಮುಖವಾಗಿ ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ವ್ಯಾಪಾರ ವಹಿವಾಟು ಕೇಂದ್ರಗಳು, ವರ್ಕ್ ಶಾಪ್‌ಗಳು, ಕಾಫಿ ಕ್ಯೂರಿಂಗ್‌ಗಳು ಚೆಸ್ಕಾಂ ವಿದ್ಯುತ್ ನಂಬಿಕೊAಡು ಕೆಲಸ ನಿರ್ವಹಿಸುತ್ತಿವೆ.
ಇಂತಹ ಸ್ಥಳದಲ್ಲಿ ಸಾವಿರಾರು ನೌಕರರು ಪ್ರತಿನಿತ್ಯ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾದಲ್ಲಿ ಇವರೆಲ್ಲರಿಗೂ ಕೆಲಸ ಇಲ್ಲದಿದ್ದರೂ ಮಾಲೀಕರು ದಿನನಿತ್ಯದ ವೇತನ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಗೋಣಿಕೊಪ್ಪ ಚೆಸ್ಕಾಂ ಕಚೇರಿಯಿಂದ ಪೂರೈಕೆಯಾಗುವ ವಿದ್ಯುತ್‌ನಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಗೋಣಿಕೊಪ್ಪ, ಪೊನ್ನಂಪೇಟೆ ಸೇರಿದಂತೆ ಹಲವಾರು ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ದಿನಗಟ್ಟಲೆ ಸಮಯ ವ್ಯಯವಾಗುತ್ತಿದೆ.
ಇಂತಹ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸುವ ಸಲುವಾಗಿ ಇಲಾಖೆಯು ಎಇಇ ರವರನ್ನು ನಿಯೋಜನೆಗೊಳಿಸಿ, ಇವರು ಉಳಿದುಕೊಳ್ಳಲು ಚೆಸ್ಕಾಂ ಕಚೇರಿಯ ಸಮೀಪದಲ್ಲಿಯೇ ವಸತಿ ಸೌಕರ್ಯ ಗೋಣಿಕೊಪ್ಪಲು, ಜ. ೨೦: ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿರುವ ಸೆಸ್ಕ್ ಇಲಾಖೆಯು ಆಧುನಿಕ ಶೈಲಿಯಲ್ಲಿ ಮುಂದಿದ್ದರೂ ನಿಗದಿತ ಸಮಯದಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ.
ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿಗೆ ದಿನಪೂರ್ತಿ ವಿದ್ಯುತ್ ನಿಲುಗಡೆಗೊಳಿಸುವುದರಿಂದ ನಗರದ ವ್ಯಾಪಾರಸ್ಥರಿಗೆ ಹಾಗೂ ವಿದ್ಯುತ್ ಗ್ರಾಹಕರಿಗೆ ಲಕ್ಷಾಂತರ ಹಣ ನಷ್ಟ ಅನುಭವಿಸುವಂತಾಗಿದೆ.
ಚೆಸ್ಕಾA ಇಲಾಖೆಯ ವತಿಯಿಂದ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಆಗಿಂದಾಗ್ಗೆ ಇಲಾಖೆಯು ಕೋಟ್ಯಾಂತರ ಹಣವನ್ನು ವಿನಿಯೋಗ ಮಾಡುತ್ತಿದೆ. ಆದರೆ ಇದರಿಂದ ದೈನಂದಿನ ಚಟುವಟಿಕೆಗಳಿಗೆ ಅವಶ್ಯಕತೆ ಇರುವ ವಿದ್ಯುತ್ ಪಡೆಯಲು ಗ್ರಾಹಕನಿಗೆ ಇಲ್ಲಿಯ ತನಕ ಸಾಧ್ಯವಾಗುತ್ತಿಲ್ಲ.
ಗೋಣಿಕೊಪ್ಪದ ಚೆಸ್ಕಾಂ ಕಚೇರಿಯಿಂದ ಗೋಣಿಕೊಪ್ಪ ಸೇರಿದಂತೆ ಹಾತೂರು, ತಿತಿಮತಿ, ಹೊಸೂರು, ಬಲ್ಯಮುಂಡೂರು, ಕಿರುಗೂರು ಹಾಗೂ ಪೊನ್ನಂಪೇಟೆ ಭಾಗಕ್ಕೆ ವಿದ್ಯುತ್ ಪೂರೈಕೆಯಾಗುತ್ತಿದೆ.
ಪ್ರಮುಖವಾಗಿ ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ವ್ಯಾಪಾರ ವಹಿವಾಟು ಕೇಂದ್ರಗಳು, ವರ್ಕ್ ಶಾಪ್‌ಗಳು, ಕಾಫಿ ಕ್ಯೂರಿಂಗ್‌ಗಳು ಚೆಸ್ಕಾಂ ವಿದ್ಯುತ್ ನಂಬಿಕೊAಡು ಕೆಲಸ ನಿರ್ವಹಿಸುತ್ತಿವೆ.
ಇಂತಹ ಸ್ಥಳದಲ್ಲಿ ಸಾವಿರಾರು ನೌಕರರು ಪ್ರತಿನಿತ್ಯ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾದಲ್ಲಿ ಇವರೆಲ್ಲರಿಗೂ ಕೆಲಸ ಇಲ್ಲದಿದ್ದರೂ ಮಾಲೀಕರು ದಿನನಿತ್ಯದ ವೇತನ ನೀಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಗೋಣಿಕೊಪ್ಪ ಚೆಸ್ಕಾಂ ಕಚೇರಿಯಿಂದ ಪೂರೈಕೆಯಾಗುವ ವಿದ್ಯುತ್‌ನಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಗೋಣಿಕೊಪ್ಪ, ಪೊನ್ನಂಪೇಟೆ ಸೇರಿದಂತೆ ಹಲವಾರು ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ದಿನಗಟ್ಟಲೆ ಸಮಯ ವ್ಯಯವಾಗುತ್ತಿದೆ.
ಇಂತಹ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಕಲ್ಪಿಸುವ ಸಲುವಾಗಿ ಇಲಾಖೆಯು ಎಇಇ ರವರನ್ನು ನಿಯೋಜನೆಗೊಳಿಸಿ, ಇವರು ಉಳಿದುಕೊಳ್ಳಲು ಚೆಸ್ಕಾಂ ಕಚೇರಿಯ ಸಮೀಪದಲ್ಲಿಯೇ ವಸತಿ ಸೌಕರ್ಯ ಕಲ್ಪಿಸಲಾಗಿದೆ.
ಇಲಾಖೆ ಇತರ ಸಿಬ್ಬಂದಿಗಳ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸಲು ಹಾಗೂ ಸಮಸ್ಯೆ ಗಂಭೀರತೆ ಇದ್ದ ವೇಳೆ ಕೂಡಲೇ ಬಗೆಹರಿಸಲು ಇಂತಹ ಸೌಕರ್ಯಗಳನ್ನು ಇಲಾಖೆ ಒದಗಿಸಿದೆ. ಆದರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಇಇ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವ ಕಾರಣ ನಗರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿಬಂದಿದೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.
ಕಳೆದ ಮೂರು ದಿನಗಳ ಹಿಂದೆ ನಡೆದ ರಸ್ತೆ ಅಪಘಾತ ಸಂದರ್ಭ ಮುಂಜಾನೆಯ ೪.೩೦ಕ್ಕೆ ನಿಲುಗಡೆಗೊಂಡ ವಿದ್ಯುತ್ ಸಂಜೆಯ ಆರು ಗಂಟೆಗೆ ಬಂದಿದೆ. ದಿನ ಪೂರ್ತಿ ವಿದ್ಯುತ್ ನಿಲುಗಡೆ ಆದ ಕಾರಣ ಸಾಕಷ್ಟು ನಷ್ಟ ಸಂಭವಿಸಿದೆ. ಈ ವೇಳೆ ಕೇಂದ್ರ ಕಚೇರಿಯಲ್ಲಿ ಇರಬೇಕಾದ ಎಇಇ ರವರು ಮೈಸೂರಿನಿಂದ ಆಗಮಿಸಿದ್ದು ಸಂಜೆಯ ವೇಳೆಯಲ್ಲಿ.
ಇಲ್ಲಿನ ಕೆಲವು ವಿದ್ಯುತ್ ಗುತ್ತಿಗೆದಾರರು ಎಇಇ ರವರಿಗೆ ಕರೆ ಮಾಡಿದರೇ ತಕ್ಷಣ ಸ್ಪಂದಿಸಿ ಸಮಯಕ್ಕೆ ಸರಿಯಾಗಿ ಆಗಮಿಸಿ, ನಂತರ ಇವರ ಕಡತಕ್ಕೆ ಸಹಿ ಆದ ತಕ್ಷಣ ಇಲ್ಲಿಂದ ಮತ್ತೆ ಮೈಸೂರಿನತ್ತ ಇವರು ಪ್ರಯಾಣ ಬೆಳೆಸುತ್ತಾರೆ.
ಚೆಸ್ಕಾಂ ಕಚೇರಿಯ ಬಳಿಯಲ್ಲೇ ಸುಸಜ್ಜಿತ ವಸತಿ ಸೌಕರ್ಯವಿದ್ದರೂ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಇಇ ನೀಲಶೆಟ್ಟಿ ಎಂಬ ಅಧಿಕಾರಿ ಪ್ರತಿನಿತ್ಯ ಮೈಸೂರಿನಿಂದ ಆಗಮಿಸಿ ಇಲ್ಲಿನ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.
ಅಲ್ಲದೇ ಕಚೇರಿಗೆ ಮಧ್ಯಾಹ್ನ ೧೨ ಗಂಟೆಗೆ ಅಥವಾ ಸಂಜೆಯ ೩ ಗಂಟೆಯ ವೇಳೆಯಲ್ಲಿ ಆಗಮಿಸಿ ಕೆಲ ಗಂಟೆ ಕಾಲ ಕಳೆದು ಮತ್ತೆ ಸಂಜೆಯ ೫ ಗಂಟೆಯ ವೇಳೆ ವಾಪಾಸು ತನ್ನ ಮೈಸೂರಿನ ಮನೆಯತ್ತ ತೆರಳುತ್ತಿದ್ದಾರೆ ಎಂಬ ಆರೋಪವಿದೆ.
ಇದರಿಂದಾಗಿ ಗ್ರಾಹಕರು ತಮ್ಮ ಸಮಸ್ಯೆಯನ್ನು ತೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿಕಾರಿ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಆಗಮಿಸದೇ ಇರುವ ಕಾರಣ ಇಲ್ಲಿನ ವಿದ್ಯುತ್ ಸಮಸ್ಯೆ ಬಿಗಡಾಯಿಸಲು ಪ್ರಮುಖ ಕಾರಣವಾಗಿದೆ. - ಹೆಚ್.ಕೆ. ಜಗದೀಶ್