ಮಡಿಕೇರಿ, ಜ. ೨೦: ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ಚತುರ್ಭಾಷಾ ಸಾಹಿತಿ ದಿ. ಮುಲ್ಲೇಂಗಡ ಬೇಬಿ ಚೋಂದಮ್ಮ ಅವರಿಗೆ ನುಡಿ ನಮನ ಅರ್ಪಿಸುವ ಸಲುವಾಗಿ ಅವರ ಬದುಕು ಸಾಹಿತ್ಯ ಎಂಬ ವಿಷಯದಲ್ಲಿ ಅಂತರ್ಜಾಲದ ಮೂಲಕ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಮುಕ್ಕಾಟಿರ ಮೌನಿ ನಾಣಯ್ಯ ಪ್ರಥಮ, ದ್ವಿತೀಯ ಚೊಟ್ಟೆಯಂಡಮಾಡ ಲಲಿತ ಕಾರ್ಯಪ್ಪ ಹಾಗೂ ತೃತಿಯ ಸ್ಥಾನವನ್ನು ಬಾಚಮಾಡ ಭೀಮಯ್ಯ ಪಡೆದುಕೊಂಡರು.
ತೀರ್ಪುಗಾರರಾಗಿ ದಿ. ಬೇಬಿ ಚೋಂದಮ್ಮ ಅವರ ಪುತ್ರ ಮುಲ್ಲೇಂಗಡ ಮಧೋಶ್ ಪೂವಯ್ಯ ಕಾರ್ಯ ನಿರ್ವಹಿಸಿದರೆ, ವಿಜೇತರಿಗೆ ನಗದು ಬಹುಮಾನವನ್ನು ಬೆಂಗಳೂರಿನ ಉದÀ್ಯಮಿ ಸರ್ಕಂಡ ದೊರೆಮಣಿ ಸೋಮಯ್ಯ ಪ್ರಾಯೋಜಿಸಿದ್ದರು. ಸ್ಪರ್ಧಾ ಸಂಚಾಲಕರಾಗಿ, ಸಂಘಟನೆಯ ಆಡಳಿತ ಮಂಡಳಿ ನಿರ್ದೇಶಕ ಮಲ್ಲಂಡ ದರ್ಶನ್ ಮುತ್ತಪ್ಪ ಕಾರ್ಯ ನಿರ್ವಹಿಸಿದರು.