ಮಡಿಕೇರಿ, ಜ. ೨೧: ಬೇರೆ ಧರ್ಮಕ್ಕೆ ಮತಾಂತರಗೊAಡ ಗಿರಿಜನರನ್ನು ಎಸ್.ಟಿ. ಪಟ್ಟಿಯಿಂದ ತೆಗೆದು ಹಾಕಬೇಕೆಂದು ಭಾರತದ ರಾಷ್ಟçಪತಿಗಳಿಗೆ ಜಿಲ್ಲಾಧಿಕಾರಿ ಮೂಲಕ ಗಿರಿಜನ ಸುರಕ್ಷಾ ವೇದಿಕೆ ಕೊಡಗು ಜಿಲ್ಲಾ ಘಟಕ ಮನವಿ ಸಲ್ಲಿಸಿದೆ.
ಇತ್ತೀಚಿಗೆ ಕುಶಾಲನಗರದಲ್ಲಿ ನಡೆದ ವಿವಿಧ ಹಾಡಿ ಪ್ರಮುಖರ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯದಂತೆ ಮನವಿ ಸಲ್ಲಿಸಲಾಗಿದೆ.
ಮತಾಂತವಾಗಿ ಮೂಲ ಸಂಸ್ಕೃತಿ, ಪದ್ಧತಿಯನ್ನು ತ್ಯಜಿಸುವುದರಿಂದ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಪಟ್ಟಿಯಿಂದ ಅಂತವರನ್ನು ತೆಗೆದು ಹಾಕಬೇಕು. ಮುಂದಿನ ಜನಗಣತಿ ಸಂದರ್ಭದಲ್ಲಿ ಗಿರಿಜನರಿಗೆ ಪ್ರತ್ಯೇಕ ಕೋಡ್ನಡಿ ಗಿರಿಜನರು ಎಂದು ದಾಖಲಿಸುವ ಬದಲು ರಿಲೀಜಿಯಸ್ ಕಾಲಂನಡಿ ಹಿಂದೂ ಧರ್ಮ ಎಂದು ದಾಖಲಿಸಿಕೊಳ್ಳಬೇಕು. ೨೦೦೬ ರ ಅರಣ್ಯ ಹಕ್ಕು ಕಾಯ್ದೆಯಂತೆ ಪ್ರತಿ ಗಿರಿಜನ ಕುಟುಂಬಕ್ಕೆ ಮೂರು ಎಕರೆ ಭೂಮಿ, ಗಿರಿಜನ ಹಾಡಿಯ ನಿವಾಸಿಗಳಿಗೆ ಸ್ಮಶಾನ, ದೇವಸ್ಥಾನ, ಸಮುದಾಯ ಭವನ ನಿರ್ಮಾಣಕ್ಕೆ ನೀಡುವುದು ಸೇರಿದಂತೆ ಯೋಜನೆ ಸಮರ್ಪಕವಾಗಿ ಅನುಷ್ಟಾನ ಮಾಡುವಂತೆ ಸಂಘಟನೆ ಆಗ್ರಹಿಸಿದೆ.
ಜೊತೆಗೆ ಸಾಂಪ್ರದಾಯಿಕ ಗಿರಿಜನರ ಪಟ್ಟಿಗೆ ಕಾಡು ಕುರುಬ, ಯರವ, ಸೋಲಿಗ, ಕುಡಿಯ ಸಮುದಾಯ ಸೇರಿಸುವಂತೆ ಮನವಿ ಮಾಡಿದೆ.
ಈ ಸಂದರ್ಭ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಜಗದೀಶ್, ಮುಖಂಡರಾದ ಪ್ರಭಾಕರ್, ಕುಡಿಯರ ಮುತ್ತಪ್ಪ, ಕುಡಿಯರ ಕಾವೇರಪ್ಪ, ಪೊನ್ನಪ್ಪ ಇದ್ದರು.