ಕಡಂಗ, ಜ. ೨೦: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕಡಂಗ ಗ್ರಾ.ಪಂ. ಹಾಗೂ ನರಿಯಂದಡ ಗ್ರಾ.ಪಂ. ವ್ಯಾಪ್ತಿಗೆ ಭೇಟಿ ನೀಡಿ ಅಲ್ಲಿ ತಮ್ಮ ಅನುದಾನದಿಂದ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ಹಾಗೂ ಉದ್ಘಾಟನೆ ನಡೆಸಿದರು.

ಕಡಂಗ ಗ್ರಾ.ಪಂ. ವ್ಯಾಪ್ತಿಯ ಬದ್ರಿಯಾ ಸುನ್ನಿ ಮುಸ್ಲಿಂ ಜಮಾಅತ್, ಅರಪಟ್ಟು ತಡೆಗೋಡೆ ಹಾಗೂ ಅಡುಗೆಕೋಣೆ ಕಾಮಗಾರಿ ವೀಕ್ಷಿಸಿದರು. ಕಡಂಗದ ನೂತನ ಕಾಂಕ್ರೀಟ್ ರಸ್ತೆ ಹಾಗೂ ತಡೆಗೋಡೆಗೆ ಈ ಸಂದರ್ಭ ಸ್ಥಳೀಯರು ಅರ್ಜಿ ನೀಡಿದರು. ಬಳಿಕ ನರಿಯಂದಡ ಗ್ರಾ.ಪಂ.ಗೆ ಭೇಟಿ ನೀಡಿ ಕಟ್ಟಡ ಕಾಮಗಾರಿ ಪರಿಶೀಲನೆ ಹಾಗೂ ೫ ಲಕ್ಷದ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಪುಲಿಮಕ್ಕಿ ಚೆರುವಾಳಂಡ ಐನ್‌ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಈ ಸಂದರ್ಭ ಪಂಚಾಯಿತಿ ಸದಸ್ಯರಾದ ವಿನೋದ್ ನಾಣಯ್ಯ, ಸುಬಿರ್, ರಾಣೆ, ವಾಣಿ, ಗ್ರಾಮಸ್ಥರಾದ ಮಮ್ಮು, ಸುಲೈಮಾನ್ ಮತ್ತಿತರರು ಹಾಜರಿದ್ದರು.