ಸೋಮವಾರಪೇಟೆ, ಜ. ೧೯: ನೆರೆಯ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದಲ್ಲಿ ಜಿಲ್ಲೆಯ ವ್ಯಕ್ತಿಯೋರ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಕೃತ್ಯ ನಡೆದಿದೆ. ಕುಶಾಲನಗರ ತಾಲೂಕಿನ ಹೆಬ್ಬಾಲೆ ಸಮೀಪದ ೬ನೇ ಹೊಸಕೋಟೆ ನಿವಾಸಿ ವೈಶಾಲಿ ಅವರ ಪತಿ ಕೃಷಿಕ ಹೆಚ್.ಟಿ. ಹರೀಶ್ (೩೬) ಕೊಲೆಯಾದ ವ್ಯಕ್ತಿಯಾಗಿದ್ದು, ಘಟನೆಗೆ ಅನೈತಿಕ ಸಂಬAಧ ಹಾಗೂ ಹಣದ ವ್ಯವಹಾರ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಕೊಣನೂರು ಸರ್ಕಾರಿ ಬಸ್ ನಿಲ್ದಾಣದ ಎದುರಿರುವ ಬಿಎಸ್‌ಸಿ ಲಾಡ್ಜ್ನಲ್ಲಿ ಘಟನೆ ನಡೆದಿದ್ದು, ಮಾರಕಾಸ್ತçಗಳಿಂದ ಕೊಚ್ಚಿ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಹರೀಶ್ ಮೃತದೇಹ ಪತ್ತೆಯಾಗಿದೆ.

ಘಟನೆಗೆ ಸಂಬAಧಿಸಿದAತೆ ೬ನೇ ಹೊಸಕೋಟೆ ಗ್ರಾಮದ ಚಿಕ್ಕಯ್ಯ ಅವರ ಪುತ್ರ ಲಕ್ಷö್ಮಣ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಘಟನೆಯ ಸೂತ್ರಧಾರಿ ಎನ್ನಲಾದ ಬೆಂಗಳೂರು ಮಾಗಡಿ ಸಮೀಪದ ದೊಡ್ಡಸೋಮನಹಳ್ಳಿ ಗ್ರಾಮದ ಜಗದೀಶ್ ಅವರ ಪುತ್ರಿ, ೬ನೇ ಹೊಸಕೋಟೆ ಗ್ರಾಮದ ಹೆಚ್.ಸಿ. ದಿಲೀಪ್‌ಕುಮಾರ್ ಎಂಬಾತನ ಪತ್ನಿ ಸುಶ್ಮಿತಾ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಘಟನೆ ನಂತರ ಈಕೆ ತಲೆಮರೆಸಿಕೊಂಡಿದ್ದಾಳೆ.

ವಿಶ್ರಾAತಿ ನೆಪದಲ್ಲಿ ಕೊಠಡಿ: ನಿನ್ನೆ ಸಂಜೆ ೪.೩೦ರ ಸುಮಾರಿಗೆ ಕೊಣನೂರಿನ ಬಸ್‌ನಿಲ್ದಾಣ ಎದುರಿನ ಬಿ.ಎಸ್.ಸಿ. ಲಾಡ್ಜ್ಗೆ ಆಗಮಿಸಿದ ಸುಶ್ಮಿತಾ, ತಾನು ಬೆಂಗಳೂರಿನ ರಾಜಾಜಿನಗರದಲ್ಲಿ ಏರ್‌ಟೆಲ್ ಕಂಪೆನಿಯ ಪ್ರಮೋಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಇಂದು ದೇವಾಲಯದ ಪೂಜೆಗಾಗಿ ತನ್ನ ಪತಿಯೊಂದಿಗೆ ಬಂದಿದ್ದೇನೆ. ಇಂದು ಇಲ್ಲಿಯೇ ವಿಶ್ರಾಂತಿ ಪಡೆಯುವುದಾಗಿ ತಿಳಿಸಿ, ತನ್ನ ಆಧಾರ್ ಕಾರ್ಡ್ ನೀಡಿ ಕೊಠಡಿಯನ್ನು ಪಡೆದಿದ್ದಾಳೆ. ಕೆಲ ಸಮಯದಲ್ಲಿ ತನ್ನ ಪತಿ ಬರುವುದಾಗಿ ಲಾಡ್ಜ್ನ ಮಾಲೀಕ ಮಂಜುನಾಥ್ ಅವರಿಗೆ ತಿಳಿಸಿದ್ದಾಳೆ.

ಇದಾದ ಕೆಲ ಸಮಯದಲ್ಲಿಯೇ ಕೆಳಬಂದಿರುವ ಸುಶ್ಮಿತಾ ತನ್ನೊಂದಿಗೆ ಮತ್ತೋರ್ವ ವ್ಯಕ್ತಿಯನ್ನು ಕೊಠಡಿಗೆ ಕರೆದೊಯ್ದಿದ್ದಾಳೆ. ೪.೪೫ಕ್ಕೆ ಲಾಡ್ಜ್ಗೆ ಆಗಮಿಸಿದ ಸುಶ್ಮಿತಾಳ ಪತಿ ಹೆಚ್.ಸಿ. ದಿಲೀಪ್‌ಕುಮಾರ್ ತನ್ನೊಂದಿಗೆ ಮತ್ತೋರ್ವನನ್ನು ಕರೆದುಕೊಂಡು ಪ್ರತ್ಯೇಕ ಕೊಠಡಿ ಪಡೆದಿದ್ದಾನೆ. ಸಂಜೆ ೬.೩೦ರ ಸುಮಾರಿಗೆ ಲಾಡ್ಜ್ ಕೊಠಡಿಯೊಳಗೆ ಜೋರಾಗಿ ಶಬ್ದಕೇಳಿಸಿದೆ. ಲಾಡ್ಜ್ ಮಾಲೀಕರು ತಕ್ಷಣ ಮೇಲೆ ತೆರಳಿದ್ದು, ಈ ಸಂದರ್ಭ ಸುಶ್ಮಿತಾ ಲಗುಬಗೆಯಿಂದ ಕೆಳಗಿಳಿದು ಬಂದು ಸ್ಥಳದಿಂದ ಪರಾರಿಯಾಗಿದ್ದಾಳೆ.

ನಂತರ ಸುಶ್ಮಿತಾ ತಂಗಿದ್ದ ಕೊಠಡಿಗೆ ತೆರಳಿದ ಮಾಲೀಕ, ರಕ್ತದ ಕಲೆಗಳನ್ನು ಕಂಡು ಬಾಗಿಲನ್ನು ಹೊರಭಾಗದಿಂದ ಮುಚ್ಚಿದ್ದು, ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೊಠಡಿಯೊಳಗೆ ತೆರಳಿದ ಸಂದರ್ಭ, ೬ನೇ ಹೊಸಕೋಟೆ ಗ್ರಾಮದ ಲಕ್ಷö್ಮಣ ಸಿಕ್ಕಿಬಿದ್ದಿದ್ದಾನೆ.

ಇದೇ ಕೊಠಡಿಯ ಶೌಚಾಲಯದಲ್ಲಿ ರಕ್ತಸಿಕ್ತವಾಗಿದ್ದ ಹರೀಶ್‌ನ ಮೃತದೇಹ ಕಂಡುಬAದಿದೆ. ಕತ್ತಿಯಿಂದ ಹರೀಶ್‌ನ ಕುತ್ತಿಗೆ, ಎರಡೂ ಕೈಗಳು ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಹಲ್ಲೆ ನಡೆಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬAಧಿಸಿದAತೆ ಆರೋಪಿ ಲಕ್ಷö್ಮಣ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ಅನೈತಿಕ ಸಂಬAಧ ಹಿನ್ನೆಲೆ ಹರೀಶ್‌ನನ್ನು ಲಾಡ್ಜ್ಗೆ ಕರೆಯಿಸಿ

(ಮೊದಲ ಪುಟದಿಂದ) ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಕೊಣನೂರು ಪೊಲೀಸರು ಪ್ರಥಮ ವರ್ತಮಾನ ವರದಿ ತಯಾರಿಸಿದ್ದಾರೆ. ಲಾಡ್ಜ್ನಲ್ಲಿ ನಡೆದ ಘಟನೆಗಳಿಗೆ ಸಂಬAಧಿಸಿದAತೆ ಮಾಲೀಕ ಮಂಜುನಾಥ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸುಶ್ಮಿತಾಳೇ ಹರೀಶ್‌ನನ್ನು ಲಾಡ್ಜ್ ಕೊಠಡಿಗೆ ಕರೆದೊಯ್ದಿದ್ದಾಳೆ ಎನ್ನಲಾಗಿದ್ದು, ಈಕೆಯ ಪತಿ ದಿಲೀಪ್ ತನ್ನ ಸಹೋದರ ಲಕ್ಷö್ಮಣ್‌ನೊಂದಿಗೆ ಪ್ರತ್ಯೇಕ ಕೊಠಡಿ ಪಡೆದು, ಕೃತ್ಯಕ್ಕೆ ಸಹಕರಿಸಿದ ಸಂಶಯವಿದೆ.

ಘಟನೆಯ ಹಿನ್ನೆಲೆ: ೬ನೇ ಹೊಸಕೋಟೆ ಗ್ರಾಮದಲ್ಲಿ ನೆಲೆಸಿರುವ ಹೆಚ್.ಟಿ. ಹರೀಶ್, ಲಕ್ಷö್ಮಣ ಹಾಗೂ ದಿಲೀಪ್‌ಕುಮಾರ್ ಅವರುಗಳು ಅಕ್ಕಪಕ್ಕದ ನಿವಾಸಿಗಳಾಗಿದ್ದು, ದಿಲೀಪ್ ಹಾಗೂ ಲಕ್ಷö್ಮಣ ಅವರುಗಳು ಸಹೋದರರಾಗಿದ್ದಾರೆ. ಇದರಲ್ಲಿ ದಿಲೀಪ್ ಬೆಂಗಳೂರಿನ ಸುಶ್ಮಿತಾಳನ್ನು ವಿವಾಹವಾಗಿದ್ದಾನೆ. ಲಕ್ಷö್ಮಣನ ಪತ್ನಿ ಕೆಲ ಸಮಯದ ಹಿಂದೆಯೇ ಗಂಡನನ್ನು ತೊರೆದು ತವರುಮನೆ ಸೇರಿದ್ದಾಳೆ. ದಿಲೀಪ್ ಹಾಗೂ ಸುಶ್ಮಿತಾ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಲಕ್ಷö್ಮಣ ಕೂಲಿ ಕಾರ್ಮಿಕನಾಗಿದ್ದಾನೆ.

ಕೊರೊನಾ ಪ್ರಥಮ ಅಲೆಯ ಲಾಕ್‌ಡೌನ್ ಸಂದರ್ಭ ಊರಿಗೆ ಆಗಮಿಸಿದ ದಿಲೀಪ್ ಹಾಗೂ ಸುಶ್ಮಿತ ದಂಪತಿಗೆ ನೆರೆ ಮನೆಯ ಹರೀಶ್ ಅವರು ೬೦ ಸಾವಿರ ಹಣ ನೀಡಿದ್ದು, ಇದರೊಂದಿಗೆ ಚಿನ್ನದ ಚೈನ್ ಸಹ ಕೊಟ್ಟಿದ್ದರು ಎನ್ನಲಾಗಿದೆ. ಈ ಹಣವನ್ನು ಪ್ರತಿ ತಿಂಗಳು ಕಂತಿನ ರೂಪದಲ್ಲಿ ಪಾವತಿಸುವುದಾಗಿ ಹೇಳಿದ್ದರು.

ಈ ಮಧ್ಯೆ ಹರೀಶ್‌ನ ಪುತ್ರಿಗೆ ಕಣ್ಣಿನ ಸಮಸ್ಯೆ ಕಂಡುಬAದಿದ್ದು, ಹಣ ನೀಡುವಂತೆ ಸುಶ್ಮಿತಾ ಬಳಿ ಕೇಳಿದ್ದರು. ನಿನ್ನೆ ದಿನ ಕೊಣನೂರಿಗೆ ಬಂದಿದ್ದ ಸುಶ್ಮಿತಾ, ಮಧ್ಯಾಹ್ನದ ವೇಳೆಗೆ ಹರೀಶ್‌ಗೆ ಕರೆ ಮಾಡಿ ಕೊಣನೂರಿಗೆ ಬರುವಂತೆ ತಿಳಿಸಿದ್ದಳು ಎನ್ನಲಾಗಿದೆ. ಸಂಜೆ ತನ್ನ ಬೈಕ್‌ನಲ್ಲಿ ಕೊಣನೂರಿಗೆ ತೆರಳಿದ ಹರೀಶ್, ನಂತರ ಲಾಡ್ಜ್ನಲ್ಲಿ ಹತ್ಯೆಯಾಗಿದ್ದಾನೆ ಎಂದು ಸಂಬAಧಿಕರು ಮಾಹಿತಿ ನೀಡಿದ್ದಾರೆ.

ಹತ್ಯೆ ಕೃತ್ಯದ ಆರೋಪಿ ಲಕ್ಷö್ಮಣ್ ಹೇಳಿಕೆ ಪ್ರಕಾರ ಅನೈತಿಕ ಸಂಬAಧ ಘಟನೆಗೆ ಕಾರಣ ಎನ್ನಲಾಗಿದ್ದು, ಇದು ನಿಜವಾಗಿಯೂ ಅನೈತಿಕ ಸಂಬAಧದಿAದ ಉಂಟಾದ ಕೃತ್ಯವೇ ಅಥವಾ ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಹರೀಶ್ ಹತ್ಯೆಯಾದನೇ? ಎಂಬುದು ಕೃತ್ಯದ ಸೂತ್ರಧಾರಿ ಎನ್ನಲಾಗಿರುವ ಸುಶ್ಮಿತಾಳ ಬಂಧನ ಹಾಗೂ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ. ಘಟನಾ ಸ್ಥಳಕ್ಕೆ ಕೊಣನೂರು ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ಠಾಣಾಧಿಕಾರಿ ಮಂಜುನಾಥ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.