ಮಡಿಕೇರಿ, ಜ. ೧೯: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಕಟಣೆ ಯೋಜನೆಯಡಿ ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ. ಲೇಖಕರು ಅರೆಭಾಷೆ ಕಥೆ, ಕವನ, ಲೇಖನ, ವಿಚಾರ ಸಾಹಿತ್ಯ, ಲಲಿತ ಪ್ರಬಂಧ, ಸಂಶೋಧನಾ ಕೃತಿಗಳು ಇನ್ನಿತರ ಬರಹಗಳಿದ್ದಲ್ಲಿ (ಪುಸ್ತಕಗಳ ಆಯ್ಕೆ ಹಕ್ಕು ಅಕಾಡೆಮಿಯಾಗಿದೆ. ಹಾಗೂ ಬರಹ ಕನಿಷ್ಟ ೭೦ ರಿಂದ ೮೦ ಪುಟಗಳಿರಬೇಕು) ಹಸ್ತಪ್ರತಿಗಳನ್ನು ಅಕಾಡೆಮಿಗೆ ಸಲ್ಲಿಸುವಂತೆ ರಿಜಿಸ್ಟಾçರ್ ಅವರು ತಿಳಿಸಿದ್ದಾರೆ.

ತಮ್ಮ ಹಸ್ತ ಪ್ರತಿಗಳನ್ನು ಸಲ್ಲಿಸಲು ಫೆಬ್ರವರಿ, ೧೫ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ರಿಜಿಸ್ಟಾçರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಾಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ, ಮೊ.ನಂ. ೬೩೬೨೫೨೨೬೭೭, ಇ-ಮೇಲ್: ಚಿಡಿebಚಿseಚಿಛಿಚಿಜemಥಿ @gmಚಿiಟ.ಛಿom ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ತಿಳಿಸಿದ್ದಾರೆ.