ಕೂಡಿಗೆ, ಜ. ೧೯: ಹುದುಗೂರು ಮತ್ತು ಕಾಳಿದೇವನ ಹೊಸೂರು ಗ್ರಾಮಗಳನ್ನು ಶೀತ ಪೀಡಿತ ಗ್ರಾಮಗಳೆಂದು ಘೋಷಣೆ ಮಾಡುವ ಬಗ್ಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿಲು ಕಂದಾಯ ಇಲಾಖೆಗೆ ಮತ್ತು ಕೂಡಿಗೆ ಗ್ರಾಮ ಪಂಚಾಯಿತಿಗೆ ಸಂಬAಧಿಸಿದ ಇಲಾಖೆಯವರಿಗೆ ಶಿಫಾರಸ್ಸು ಮಾಡಲಾಗಿದೆ. ಕುಶಾಲನಗರ ತಾಲೂಕು ವ್ಯಾಪ್ತಿಯ ಹಾರಂಗಿಯಲ್ಲಿ ಜಲಾಶಯವಿದ್ದು ಹುದುಗೂರು ಮತ್ತು ಕಾಳಿದೇವನ ಹೊಸೂರು ಗ್ರಾಮಗಳು ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಪ್ರಾರಂಭಿಕ ಗ್ರಾಮಗಳಾಗಿವೆ. ಈ ಎರಡು ಗ್ರಾಮಗಳಲ್ಲಿ ಹಾದುಹೋಗಿರುವ ಹಾರಂಗಿ ಮುಖ್ಯ ನಾಲೆ ಮತ್ತು ಉಪ ಕಾಲುವೆಗಳು ಹಾಗೂ ಕಕ್ಕೆ ಹೊಳೆಗಳಿಂದಾಗಿ ಕಾಂಕ್ರೀಟ್ ಲೈನಿಂಗ್ ಸಂಪೂರ್ಣ ಹಾಳಾಗಿರುವುದರಿಂದ ಭೂಮಿ ಫಲವತ್ತತೆಯನ್ನು ಕಳೆದುಕೊಂಡಿದ್ದು, ಈ ಎರಡೂ ಗ್ರಾಮಗಳನ್ನು ಶೀತ ಪೀಡಿತ ಗ್ರಾಮಗಳೆಂದು ಘೋಷಣೆ ಮಾಡಲು ಈ ಭಾಗದ ನೂರಾರು ರೈತರು ಗ್ರಾಮಸ್ಥರು ಒತ್ತಾಯ ಮಾಡಿದ್ದರು. ಈ ಸಂಬAಧ ಕಳೆದ ನವೆಂಬರ್‌ನಲ್ಲಿ ‘ಶಕ್ತಿ’ಯಲ್ಲಿ ವರದಿ ಪ್ರಕಟಿಸಲಾಗಿತ್ತು. ಈ ವರದಿಗೆ ಸ್ಪಂದನ ದೊರಕಿದ್ದು, ಮೈಸೂರು ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಮುಖ್ಯ ಆಡಳಿತಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿಗಳು ಶಿಫಾರಸ್ಸು ಪತ್ರದಲ್ಲಿ ಹಾರಂಗಿ ಜಲಾನಯನದ ಪ್ರಾರಂಭಿಕ ಅಚ್ಚುಕಟ್ಟು ವ್ಯಾಪ್ತಿಯ ಗ್ರಾಮಗಳಾದ ಹುದುಗೂರು, ಕಾಳಿದೇವನ ಹೊಸೂರು ಗ್ರಾಮಗಳನ್ನು ಶೀತ ಪೀಡಿತ ಗ್ರಾಮಗಳೆಂದು ಘೋಷಣೆ ಮಾಡುವ ಬಗ್ಗೆ ಉನ್ನತಮಟ್ಟದ ಸಮಿತಿಯೊಂದನ್ನು ರಚಿಸಿ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡುವಂತೆ ಕೂಡಿಗೆ ಗ್ರಾಮ ಪಂಚಾಯತಿ, ಕಂದಾಯ ಇಲಾಖೆಗೆ ಪತ್ರ ಕಳುಹಿಸಿದ್ದಾರೆ. ಇದರ ಜೊತೆಯಲ್ಲಿ ಸಮಿತಿ ರಚನೆ ಮಾಡಿ ಅದರ ನಿಯಮನುಸಾರವಾಗಿ ಪರಿಶೀಲಸಿ ಅಗತ್ಯ ವರದಿ ಸಲ್ಲಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ. - ಕೆ.ಕೆ. ನಾಗರಾಜಶೆಟ್ಟಿ