ಕೂಡಿಗೆ, ಜ. 18: ಸೀಗೆಹೊಸೂರು ಗ್ರಾಮದ ಸಮೀಪದ ಜೇನುಕಲ್ಲು ಬೆಟ್ಟ ಗ್ರಾಮದಲ್ಲಿರುವ ಶ್ರೀ ಉದ್ಭವ ಕಾಡು ಬಸವೇಶ್ವರ ದೇವಾಲಯದ ಆವರಣದಲ್ಲಿ ಮಂಡಲ ಪೂಜೋತ್ಸವ ಕಾರ್ಯಕ್ರಮ ನಡೆಯಿತು.

ಇದರ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಶ್ರೀ ಗಣಪತಿ ಹೋಮ, ರುದ್ರಹೋಮ ಮಹಾ ರುದ್ರಾಭಿಷೇಕ, ಅಷ್ಟೋತ್ತರ, ತೀರ್ಥ ಪ್ರಸಾದ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು.

ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಣಸೂರು ತಾಲೂಕಿನ ಗೌಡಗೆರೆ ಶ್ರೀ ಗುರು ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮಿ ವಹಿಸಿ ಆಶೀರ್ವಚನ ನೀಡಿದರು.

ಮಹಾಮಂಗಳಾರತಿ ಅನ್ನ ಸಂತರ್ಪಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ನಂಜುಂಡ ಸ್ವಾಮಿ ಕಾರ್ಯದರ್ಶಿ ಬಸವರಾಜ್ ಸೇರಿದಂತೆ ಸಮಿತಿಯ ಸದಸ್ಯರುಗಳಾದ ನಾಗೇಶ್, ನವೀನ್, ಪರಮನಾಥ, ದೇವರಾಜ್, ಅಪ್ಪಾಜಿ, ಕುಮಾರ್, ವೆಂಕಟರಾಮಣ್ಣ, ಮಂಜುನಾಥ, ಸೇರಿದಂತೆ ಸೀಗೆಹೊಸೂರು ಭುವನಗಿರಿ ಜೇನುಕಲ್ಲು ಬೆಟ್ಟ ಗ್ರಾಮದ ಭಕ್ತಾದಿಗಳು ಭಾಗವಹಿಸಿದ್ದರು.