ಶನಿವಾರಸಂತೆ, ಜ. ೧೯: ಶನಿವಾರಸಂತೆ ಗ್ರಾ.ಪಂ. ೨೦೨೨-೨೩ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವತಿಯಿಂದ ಹಮ್ಮಿ ಕೊಳ್ಳುವ ವಿವಿಧ ಕ್ರಿಯಾಯೋಜನೆಗಳ ಅನುಮೋದನೆ ಸಂಬAಧ ವಿಶೇಷ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಸಭೆಯಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಇಂಜಿನಿಯರ್ ರಾಜೇಶ್, ನರೇಗಾ ಯೋಜನೆ ವತಿಯಿಂದ ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ, ಪಂಗಡ ಫಲಾನುಭವಿ ಗಳಿಗೆ ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ ಮುಂತಾದ ವೈಯಕ್ತಿಕ ಯೋಜನೆ ಕುರಿತು ಮತ್ತು ನರೇಗಾ ಯೋಜನೆಯಿಂದ ನಡೆಯುವ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಗ್ರಾಮಸ್ಥರಾದ ನಾಗರಾಜ್ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಡ ಕೂಲಿ ಕಾರ್ಮಿಕರು ಸೇರಿದಂತೆ ಬಿಪಿಎಲ್ ಫಲಾನುಭವಿಗಳು ಸಾಕಷ್ಟಿದ್ದಾರೆ. ಆದರೆ ಇಲ್ಲಿ ಯಾರಿಗೂ ಹೊಲ, ಗದ್ದೆ, ತೋಟಗಳಿಲ್ಲ. ನಾವು ಹೇಗೆ ನರೇಗಾ ಯೋಜನೆಯಿಂದ ವೈಯಕ್ತಿಕ ಫಲಾನುಭವಿಗಳಾಗಲು ಸಾಧ್ಯ ಎಂದು ಪ್ರಶ್ನಿಸಿದರು. ಇದಕ್ಕೆ ಸಮಜಾಯಿಷಿಕೆ ನೀಡಿದ ನೋಡಲ್ ಅಧಿಕಾರಿ ಕೆ.ಎಸ್. ಸಿಂಧೂ ನರೇಗಾ ವೈಯಕ್ತಿಕ ಯೋಜನೆ ಗ್ರಾಮೀಣ ಭಾಗದ ಜನರಿಗೆ ಉಪಯೋಗವಾಗುತ್ತದೆ. ಪಟ್ಟಣ, ನಗರ ವ್ಯಾಪ್ತಿಯಲ್ಲಿ ವಿರಳ ಸಂಖ್ಯೆಯಲ್ಲಿ ಫಲಾನುಭವಿಗಳಿರುತ್ತಾರೆ. ಇದು ಸರಕಾರದ ಯೋಜನೆಯಾಗಿರುವುದ ರಿಂದ ಸಭೆಯಲ್ಲಿ ಮಾಹಿತಿ ನೀಡಬೇಕಾಗುತ್ತದೆ. ನರೇಗಾ ಯೋಜನೆ ಯಿಂದ ಚರಂಡಿ, ಇಂಗುಗುAಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅವಕಾಶ ಇದೆ. ಇಂತಹ ಇಂಗುಗುAಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅವಕಾಶ ಇದೆ. ಇಂತಹ ಕಾಮಗಾರಿ ಗಳಿಗಾಗಿ ಕ್ರಿಯಾಯೋಜನೆ ರೂಪಿಸಲು ಅವಕಾಶ ಮಾಡಿಕೊಡು ವಂತೆ ಮನವಿ ಮಾಡಿದರು.
ಗ್ರಾಮ ಸಭೆಯಲ್ಲಿ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ನರೇಗಾ ಯೋಜನೆ ವತಿಯಿಂದ ನಡೆಯುವ ಇಂಗುಗುAಡಿ, ಚರಂಡಿ ನಿರ್ಮಾಣ ಮುಂತಾದ ಕಾಮಗಾರಿಗಳನ್ನು ಕ್ರಿಯಾಯೋಜನೆಗೆ ಸೇರಿಸಲಾಯಿತು. ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ತಡೆಗೋಡೆ ನಿರ್ಮಾಣ, ಆಟದ ಮೈದಾನ ಅಭಿವೃದ್ಧಿ ಕಾಮಗಾರಿ, ಸರಕಾರಿ ಉರ್ದು ಪ್ರಾಥಮಿಕ ಶಾಲೆಗೆ ತಡೆಗೋಡೆ ನಿರ್ಮಾಣ ಮತ್ತು ವಿದ್ಯಾರ್ಥಿಗಳು ಫುಟ್ಬಾಲ್, ವಾಲಿಬಾಲ್ ಆಟ ಆಡಲು ಕ್ರೀಡಾ ಮೈದಾನದ ನಿರ್ಮಾಣ, ಗುಂಡೂರಾವ್ ಬಡಾವಣೆಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಉದ್ಯಾನವನ ನಿರ್ಮಾಣ, ತ್ಯಾಗರಾಜ ಕಾಲೋನಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ತಡೆಗೋಡೆ ಮತ್ತು ಇಂಗುಗುAಡಿ ನಿರ್ಮಾಣ, ೧ನೇ ವಿಭಾಗದಲ್ಲಿ ಚರಂಡಿ ಸ್ವಚ್ಛತೆ ಕಾರ್ಯ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸುವ ಕುರಿತು ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೇಖರ್, ನರೇಗಾ ಯೋಜನೆ ವತಿಯಿಂದ ಹಮ್ಮಿಕೊಳ್ಳುವ ವಿವಿಧ ಕಾಮಗಾರಿಗಳ ಬಗ್ಗೆ ಕ್ರಿಯಾಯೋಜನೆ ರೂಪಿಸುವ ಸಲುವಾಗಿ ಸಭೆಯನ್ನು ಕರೆಯಲಾಗಿದೆ. ಇನ್ನು ಬಹಳಷ್ಟು ಕಾಮಗಾರಿಗಳು ಗ್ರಾ.ಪಂ. ಮತ್ತು ಸರಕಾರದ ವಿವಿಧ ಯೋಜನೆಯಿಂದ ನಡೆಯುತ್ತದೆ. ಈ ನಿಟ್ಟಿನಲ್ಲಿ ನಮ್ಮ ಗ್ರಾ.ಪಂ.ಯು ಹಂತ ಹಂತವಾಗಿ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಿದೆ ಎಂದರು.
ಗ್ರಾಮ ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಗ್ರಾ.ಪಂ. ಸದಸ್ಯರು, ಪಿಡಿಓ ಮೇದಪ್ಪ, ಕಾರ್ಯದರ್ಶಿ ತಮ್ಮಯ್ಯ ಆಚಾರ್, ಗ್ರಾ.ಪಂ. ಸಿಬ್ಬಂದಿ ವಸಂತ್, ಪೌಜಿಯಾ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.