ಮಡಿಕೇರಿ, ಜ. ೧೯: ಕೋವಿಡ್-೧೯ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿ ಮರಣ ಹೊಂದಿದ ವ್ಯಕ್ತಿಗಳ ಕುಟುಂಬದ ಕಾನೂನು ಬದ್ಧ ವಾರಸುದಾರರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಮೃತರಾಗಿರುವ ಒಟ್ಟು ೩೦೬ ಮಂದಿ ಮೃತರ ಕುಟುಂಬಗಳಿಗೆ ಪರಿಹಾರವನ್ನು ಪಾವತಿಸಲಾಗಿದೆ. ಈ ಸಂಬAಧ ಆಯಾ ಗ್ರಾಮಗಳ ಗ್ರಾಮ ಲೆಕ್ಕಿಗರು ಮೃತರ ಕುಟುಂಬದ ವಾರಸುದಾರರಿಂದ ಅರ್ಜಿಗಳನ್ನು ಪಡೆದು ದಾಖಲೆಗಳನ್ನು ಸಂಗ್ರಹಿಸಲಾಗಿದೆ.
ಯಾವುದೇ ಮೃತರ ಕುಟುಂಬವು ಈವರೆಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸದೇ ಇದ್ದಲ್ಲಿ, ಕುಟುಂಬದವರು ದಾಖಲೆಗಳೊಂದಿಗೆ ಅರ್ಜಿಯನ್ನು ಅಪರ ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲೆ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ರಾಜಾಸೀಟ್ ರಸ್ತೆ, ಮಡಿಕೇರಿ ಇವರಿಗೆ ಸಲ್ಲಿಸಬಹುದು. ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬಹುದು ಅಥವಾ ಸಂಬAಧಪಟ್ಟ ತಾಲೂಕು ತಹಶೀಲ್ದಾರರಿಗೂ ಸಲ್ಲಿಸಬಹುದು.
ಅರ್ಜಿದಾರರ ಆಧಾರ್ ಪ್ರತಿ, ಮೃತರ ಆಧಾರ್ ಪ್ರತಿ, ಪಡಿತರ ಚೀಟಿ ಪ್ರತಿ, ವೈದ್ಯಕೀಯ ದೃಢೀಕರಣ ಪತ್ರ, ಮರಣ ದೃಢೀಕರಣ ಪತ್ರ, ಅರ್ಜಿದಾರರ ಬ್ಯಾಂಕ್ ಖಾತೆ ವಿವರದೊಂದಿಗೆ ಅರ್ಜಿ ಸಲ್ಲಿಸುವಂತೆ (ಆಧಾರ್ ಜೋಡಣೆಗೊಂಡಿರುವ ಖಾತೆ) ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ತಿಳಿಸಿದ್ದಾರೆ.