ಮಡಿಕೇರಿ, ಜ. ೧೯: ಕೊಡಗಿನಲ್ಲಿ ಕಂದಾಯ ದಾಖಲೆಯಲ್ಲಿ ಕುಟುಂಬದ ಪಟ್ಟೆದಾರರ ಹೆಸರು ಇರುವ ಕಾರಣದಿಂದಾಗಿ ಎದುರಾಗುತ್ತಿರುವ ಗೊಂದಲ - ಸಮಸ್ಯೆಗಳ ವಿಚಾರದ ಕುರಿತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಇಂದು ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ ಅವರೊಂದಿಗೆ ಸಮಾಲೋಚನೆ ನಡೆಸಿದರು.ಈ ಬಗ್ಗೆ ರಾಜ್ಯ ಕಂದಾಯ ಸಚಿವರು ವಿಶೇಷ ಸಭೆ ಕರೆಯುವುದಾಗಿ ವಿಧಾನಪರಿಷತ್ನಲ್ಲಿ ತಿಳಿಸಿದ್ದಾರೆ. ಆದರೆ ಇನ್ನೂ ಸಭೆ ನಿಗದಿಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಮತ್ತೊಮ್ಮೆ ಕಂದಾಯ ಸಚಿವರ ಗಮನ ಸೆಳೆಯುವುದಾಗಿ ವೀಣಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮರಳು ವಿಚಾರಕ್ಕೆ ಸಂಬAಧಿಸಿದAತೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅಲ್ಲದೆ ಕಾಳಸಂತೆಯಲ್ಲಿ ಮರಳು ವಹಿವಾಟು ನಡೆಯುತ್ತಿರುವುದರಿಂದ ಜನಸಾಮಾನ್ಯರಿಗೆ ತಮ್ಮ ಅಗತ್ಯ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು. ಈ ವಿಚಾರದಲ್ಲಿ ಸರಕಾರದ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸದ್ಯದಲ್ಲಿ ನಡೆಯಲಿರುವ ಬೈತೂರು ಉತ್ಸವಕ್ಕೆ ತೆರಳುವ ಜಿಲ್ಲೆಯ ಭಕ್ತರಿಗೆ ಪಾಸ್ ನೀಡುವ ಕುರಿತಾಗಿಯೂ ಅವರು ಮನವಿ ಮಾಡಿದ್ದು, ಕೆಲವು ನಿರ್ಬಂಧದೊAದಿಗೆ ಅವಕಾಶ ನೀಡಲು ಜಿಲ್ಲಾಧಿಕಾರಿಗಳು ಈ ಸಂದರ್ಭ ಸಮ್ಮತಿಸಿದರು.