ನಾಪೋಕ್ಲು, ಜ. 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಾನೂರು ವಲಯದ ಕಾನೂರು ಅರಣ್ಯ ಭವನದಲ್ಲಿ ಮಹೇಶ್ವರ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಅಣಬೆ ಬೇಸಾಯ ಪ್ರಾತ್ಯಕ್ಷಿಕಾ ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರದಲ್ಲಿ ಅಣಬೆ ಕೃಷಿಯ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಪ್ರಭಾಕರ್ ಇಂದಿನ ದಿನಗಳಲ್ಲಿ ಸ್ವ ಉದ್ಯೋಗಗಳ ಸಾಲಿನಲ್ಲಿ ವಿಶೇಷವಾಗಿ ಅಣಬೆ ಕೃಷಿಯೂ ಸೇರಿಕೊಂಡಿದೆ ಅತ್ಯಂತ ಸರಳ ವಿಧಾನದಲ್ಲಿ ಅಧಿಕ ಬಂಡವಾಳದ ಅವಶ್ಯಕತೆ ಇಲ್ಲದೆ ಒಂದು ಸೀಮಿತ ಆಯಕಟ್ಟಿನ ಜಾಗದಲ್ಲಿ ಯಶಸ್ವಿಯಾಗಿ ಈ ಅಣಬೆ ಬೇಸಾಯವನ್ನು ಮಾಡಬಹುದಾಗಿದೆ ಎಂದರು. ಮಹೇಶ್ವರ ಕೇಂದ್ರದ ಸದಸ್ಯರು ಉತ್ತಮ ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ನಿತಿನ್, ಸೇವಾಪ್ರತಿನಿಧಿ ಅಯ್ಯಪ್ಪ ಹಾಗೂ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೇಯ ಆರ್. ಕಾರ್ಯಕ್ರಮ ನಿರೂಪಿಸಿದರು.