ಚೆಟ್ಟಳ್ಳಿ, ಜ. 18: ಮೀನುಕೊಲ್ಲಿ ಮೀಸಲು ಅರಣ್ಯದ ಸುತ್ತಲೂ ಕಾಡಾನೆಗಳು ದಾಟದಂತೆ ಆನೆ ನಿರೋಧಕ ಕಂದಕ ದುರಸ್ತಿ ಕಾರ್ಯ ನಡೆಯುತ್ತಿದೆ.

ಕುಶಾಲನಗರ ವಲಯಕ್ಕೆ ಒಳಪಡುವ ಮೀನುಕೊಲ್ಲಿ ಅರಣ್ಯದ ಸುತ್ತಲೂ ಆನೆ ಕಂದಕಗಳನ್ನು ತೆಗೆಯುವುದರ ಮೂಲಕ ಕಾಡಾನೆಗಳು ಅರಣ್ಯದಿಂದ ಬರದಂತೆ ನಿಯಂತ್ರಿಸಲಾಗಿತ್ತು. ಜೊತೆಗೆ ಸೋಲಾರ್ ತೂಗುತಂತಿ ಬೇಲಿಯನ್ನು ಅಳವಡಿಸಲಾಗಿದೆ. ಕೆಲವೆಡೆ ಕಂದಕಗಳಲ್ಲಿ ಮಣ್ಣು ಮುಚ್ಚಿದ್ದು ಜೊತೆಗೆ ಗಿಡಗಂಟಿಗಳೆಲ್ಲ ಬೆಳೆದು ಮುಚ್ವಿಹೋಗಿವೆ. ಆನೆ ನಿರೋಧಕ ಕಂದಕದ ದುರಸ್ತಿ ಕಾರ್ಯ ನಡೆಯುತ್ತಿದ್ದು, ಚೆಟ್ಟಳ್ಳಿ ಫಾರಂ ಕಡೆಯಿಂದ ಪ್ರಾರಂಭಿಸಲಾಗಿದ್ದು ಹಳೆಕಂದಕದಲ್ಲಿ 4 ಕಿ.ಮೀ. ವರೆಗೆ 3 ಮೀಟರ್ ಉದ್ದ 3 ಮೀಟರ್ ಅಗಲ ಅಂದರೆ ಸುಮಾರು 10 ಅಡಿಗಳಷ್ಟು ಕಂದಕವನ್ನು ಇಟ್ಯಾಚಿಮೂಲಕ ತೆಗೆಯಲಾಗುತ್ತಿಯೆಂದು ಮೀನುಕೊಲ್ಲಿ ಉಪವಲಯ ಅರಣ್ಯದ ಉಪವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.