ಮಡಿಕೇರಿ, ಜ. ೧೯: ಕುಶಾಲನಗರ ಮತ್ತು ಸೋಮವಾರಪೇಟೆ ಉಪ ವಿಭಾಗ ವ್ಯಾಪ್ತಿಯಲ್ಲಿ ನೇರ ವಿದ್ಯುತ್ ಸಂಪರ್ಕ ಪಡೆದು ಚಾಲನೆಯಲ್ಲಿರುವ ನೀರಾವರಿ ಪಂಪ್‌ಸೆಟ್ ಸ್ಥಾವರಗಳನ್ನು ಗ್ರಾಹಕರು ತಾ. ೩೧ ರೊಳಗೆ ಸಂಬAಧಿಸಿದ ಶಾಖಾಧಿಕಾರಿ/ ಉಪ-ವಿಭಾಗಾಧಿಕಾರಿ ಅವರನ್ನು ಸಂಪರ್ಕಿಸಿ ಕಡ್ಡಾಯವಾಗಿ ಸಕ್ರಮೀಕರಿಸಲು ಸೂಚಿಸಲಾಗಿದೆ.

ಅಕ್ರಮ ನೀರಾವರಿ ಸ್ಥಾವರಗಳನ್ನು ಸಕ್ರಮೀಕರಣಗೊಳಿಸದೇ ಇದ್ದಲ್ಲಿ ನಿಗಮದ ನಿಯಮಾನುಸಾರ ವಿದ್ಯುತ್ ಕಡಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ತಿಳಿಸಿದ್ದಾರೆ.