ಗೋಣಿಕೊಪ್ಪಲು. ಜ. ೧೭: ಕಳೆದ ಆರು ದಿನಗಳಿಂದ ನಡೆಸುತ್ತಿರುವ ಹುಲಿ ಕಾರ್ಯಾಚರಣೆ ನಿಲ್ಲಿಸದಿರಿ, ಕಾರ್ಯಾಚರಣೆ ಮತ್ತಷ್ಟು ಚುರುಕುಗೊಳಿಸಿ ಹುಲಿಯನ್ನು ಸೆರೆ ಹಿಡಿಯುವಂತೆ ರೈತ ಸಂಘ ಒತ್ತಾಯಿಸಿದೆ.

ದ. ಕೊಡಗಿನ ತೂಚಮಕೇರಿ ಬಳಿ ಹುಲಿ ಕಾರ್ಯಾಚರಣೆ ನಡೆಸುತ್ತಿರುವ ಕ್ಯಾಂಪ್ ಬಳಿ ತೆರಳಿದ ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಹಾಗೂ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಮುಂದಾಳತ್ವದಲ್ಲಿ ರೈತ ಸಂಘದ ಮುಖಂಡರು ತೆರಳಿ ಕ್ಯಾಂಪ್ ನಲ್ಲಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಎಸಿಎಫ್ ಉತ್ತಪ್ಪ ಹಾಗೂ ಆರ್.ಎಫ್.ಒ.ರಾಜಪ್ಪ ಬಳಿಯಲ್ಲಿ ಹುಲಿ ಕಾರ್ಯಾಚರಣೆಗೆ ಸಂಬAಧಿಸಿದAತೆ ಸುದೀರ್ಘ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಸುಜಯ್ ಬೋಪಯ್ಯ ಹುಲಿ ಕಾರ್ಯಾಚರಣೆಗೆ ಇನ್ನಷ್ಟು ಚುರುಕುಗೊಳಿಸಬೇಕು, ಉನ್ನತ ಮಟ್ಟದ ತಂಡವನ್ನು ಕರೆಸುವ ಮೂಲಕ ಹುಲಿಯನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕು,ಹುಲಿಯನ್ನು ಹಿಡಿಯದೇ ಕಾರ್ಯಾಚರಣೆಯನ್ನು ನಿಲ್ಲಿಸದಂತೆ ಅಧಿಕಾರಿಗಳಿಗೆ ಒತ್ತಾಯ ಮಾಡಿದರು. ಇವರ ಮಾತಿಗೆ ಉತ್ತರಿಸಿದ ತಿತಿಮತಿ ವಲಯದ ಎಸಿಎಫ್ ಉತ್ತಪ್ಪ ಕಳೆದ ಆರು ದಿನದಿಂದ ಸಾಕಾನೆಗಳ ಸಹಾಯ ಪಡೆದು ೫೦ ಸಿಬ್ಬಂದಿಗಳು ವಿವಿಧ ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹುಲಿಯ ಬಗ್ಗೆ ಯಾವುದೇ ಕುರುಹುಗಳಿಲ್ಲ, ಪ್ರತಿನಿತ್ಯ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ವಿವರಣೆ ನೀಡುತ್ತಿದ್ದೇವೆ. ಹುಲಿಯನ್ನು ಸೆರೆ ಹಿಡಿಯಲು ಸಾಕಷ್ಟು ಶ್ರಮ ವಹಿಸಿದ್ದೇವೆ.

ಹಿರಿಯ ಅಧಿಕಾರಿಗಳ ಆದೇಶ ಬರುವ ತನಕ ಕಾರ್ಯಾಚರಣೆ ಮುಂದುವರಿಸುತ್ತೇವೆ.ವಿವಿಧ ತಂಡಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಎಸಿಎಫ್ ಉತ್ತಪ್ಪ ರೈತ ಮುಖಂಡರಿಗೆ ಸಮಜಾಯಿಷಿಕೆ ನೀಡಿದರು. ಕಾರ್ಯಚರಣೆಗೆ ಸ್ಥಳೀಯರ ಸಹಕಾರ ಪಡೆಯಿರಿ,ಅವಶ್ಯಕತೆ ಬಿದ್ದಲ್ಲಿ ರೈತ ಸಂಘದ ಸದಸ್ಯರು ತಮ್ಮ ಕಾರ್ಯಾಚರಣೆ ತಂಡದೊAದಿಗೆ ಕೈ ಜೋಡಿಸುತ್ತಾರೆ ಎಂದು ಇದೇ ಸಂದರ್ಭ ರೈತ ಮುಖಂಡ ಆಲೇಮಾಡ ಮಂಜುನಾಥ್ ತಿಳಿಸಿದರು.

ಭೇಟಿಯ ವೇಳೆ ರೈತ ಸಂಘದ ವಿವಿಧ ಪದಾಧಿಕಾರಿಗಳಾದ ತೀತರಮಾಡ ರಾಜ, ಪುಚ್ಚಿಮಾಡ ರಾಯ್ ಮಾದಪ್ಪ, ಚೊಟ್ಟೆಕಾಳಪಂಡ ಮನು, ಮಾಯಮುಡಿಯ ಎಸ್.ಎಸ್. ಸುರೇಶ್.ಸುನಿಲ್, ಚಾರಿಮಂಡ ಮಧು, ಪೆಮ್ಮಂಡ ಉಮೇಶ್, ಗಾಂಡಗಡ ಉತ್ತಯ್ಯ, ಕಾಕಮಡ ಡಾಲಿ, ತಮ್ಮಯ್ಯ, ಕಾಕೆರ ನಾಣಯ್ಯ, ಮಲ್ಲೆಂಗಡ ಸುಬ್ರಮಣಿ, ಚೊಟ್ಟೆಕಾಳಪಂಡ ರೋಷನ್ ಮುಂತಾದವರು ಹಾಜರಿದ್ದರು. - ಹೆಚ್.ಕೆ.ಜಗದೀಶ್