ಸೋಮವಾರಪೇಟೆ, ಜ.೧೭: ಇಲ್ಲಿನ ಪಟ್ಟಣ ಪಂಚಾಯಿತಿಯ ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನ್ ದಯಾಳ್ ಯೋಜನೆಯ ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನದಡಿ ‘ಸಮುದಾಯ ಸಂಪನ್ಮೂಲ ವ್ಯಕ್ತಿ’ಗಳ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ.
‘ಡೇ-ನಲ್ಮ್’ ಯೋಜನೆಯಡಿ ರಚಿಸಿದ ಪ್ರದೇಶ ಮಟ್ಟದ ಒಕ್ಕೂಟ/ ಸ್ವಸಹಾಯ ಸಂಘಗಳ ಸದಸ್ಯರು ಅರ್ಜಿ ಸಲ್ಲಿಸಬಹುದಾಗಿದೆ. ೧೮ ರಿಂದ ೪೫ ವರ್ಷ ಮೇಲ್ಪಟ್ಟ, ಕನಿಷ್ಟ ಪಿಯುಸಿ ತೇರ್ಗಡೆಯಾಗಿರುವ, ಪಟ್ಟಣ ಪಂಚಾಯಿತಿಯ ‘ಡೇ-ನಲ್ಮ್’ ಯೋಜನೆಯಲ್ಲಿ ಕನಿಷ್ಟ ೩ ವರ್ಷದಿಂದ ಸದಸ್ಯರಾಗಿರುವ, ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.. ಹೆಚ್ಚಿನ ಮಾಹಿತಿಗೆ ಪ.ಪಂ. ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.