ಶನಿವಾರಸಂತೆ, ಜ. ೧೭: ಬೀಗ ಹಾಕಿದ್ದ ಮನೆಯ ಒಳ ನುಗ್ಗಿ ಕೊಠಡಿಯೊಳಗೆ ಟ್ರಂಕ್‌ನಲ್ಲಿ ಇರಿಸಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಸಮೀಪದ ಮಣಗಲಿ ಗ್ರಾಮದಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಣಗಲಿ ಗ್ರಾಮದ ಮಹಿಳೆ ಜಾನಕಿ ಅವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಕಳವು ನಡೆದಿದೆ. ೨೦೨೧ರ ಸೆಪ್ಟೆಂಬರ್‌ನಲ್ಲಿ ಜಾನಕಿ ಆರೋಗ್ಯ ಸರಿಯಿಲ್ಲದ ಕಾರಣ ಚಿನ್ನಾಭರಣಗಳನ್ನು ಟ್ರಂಕ್‌ನಲ್ಲಿರಿಸಿ ಬೀಗ ಹಾಕಿ ಹೊಸಪೇಟೆಯ ಕೆಪಿಟಿಸಿಎಲ್‌ನಲ್ಲಿ ಇಂಜಿನಿಯರ್ ಆಗಿರುವ ಪುತ್ರ ದರ್ಶನ್ ಮನೆಗೆ ಹೋಗಿದ್ದರು. ಡಿಸೆಂಬರ್‌ನಲ್ಲಿ ಹಿಂದಿರುಗಿ ಬಂದಿದ್ದರು. ಕೊಠಡಿಯೊಳಗಿದ್ದ ಟ್ರಂಕ್‌ನ್ನು ನೋಡಲಾಗಿ ಬೀಗ ಮುರಿದಿದ್ದು, ಒಳಗಿರಿಸಿದ್ದ ಚಿನ್ನಾಭರಣಗಳು ಕಳುವಾಗಿರುವುದು ತಿಳಿದು ಬಂದಿದೆ.
ಟ್ರAಕ್‌ನಲ್ಲಿ ಇರಿಸಿದ್ದ ೧೦ ಗ್ರಾಂನ ಚಿನ್ನದ ಓಲೆ, ೧೦ ಗ್ರಾಂನ ಕಡಗ, ೧೦ ಗ್ರಾಂನ ಓಲೆ-ಜುಮುಕಿ, ೩ ಗ್ರಾಂನ ಉಂಗುರ, ೭ ಗ್ರಾಂನ ಕಡಗ ಬಳೆ ಕಾಣೆಯಾಗಿದ್ದವು. ಒಟ್ಟು ೪೦ ಗ್ರಾಂ ತೂಕದ ರೂ. ೧.೨೦ ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿವೆ. ಮನೆಯ ಮುಂದಿನ ಹಾಗೂ ಹಿಂದಿನ ಬಾಗಿಲು ಬೀಗ ಹಾಕಿದಂತೆಯೇ ಇದ್ದು, ಸ್ನಾನದ ಕೋಣೆಯ ಮೇಲ್ಛಾವಣಿ ತೆಗೆದು ಕೆಳಗಿಳಿದು ಬಂದು ಕಳವು ಮಾಡಿರುವುದು ಕಂಡುಬAದಿರುತ್ತದೆ.
ಜಾನಕಿ ಹೊಸಪೇಟೆಯಲ್ಲಿರುವ ಪುತ್ರ ದರ್ಶನ್‌ಗೆ ವಿಷಯ ತಿಳಿಸಿದ್ದು, ಅವರು ಬಂದ ನಂತರ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಸೋಮವಾರ ತಡವಾಗಿ ದೂರು ನೀಡಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎಎಸ್‌ಐ ಶಶಿಧರ್ ಪ್ರಕರಣ ದಾಖಲಿಸಿದ್ದಾರೆ.