ಮಡಿಕೇರಿ, ಜ. ೧೭: ಪಟ್ಟಿಘಾಟ್ ಮೀಸಲು ಅರಣ್ಯ ವ್ಯಾಪ್ತಿಯ ಭಾಗಮಂಡಲ ವಲಯ, ತೊಡಿಕಾನ ಉಪ ವಲಯದ ತಣ್ಣಿಮಾನಿ ಬಳಿಯ ತಾವೂರು ಗ್ರಾಮದ ನಿಶಾನೆ ಮೊಟ್ಟೆಯ ನಿಷೇಧಿತ ಪ್ರದೇಶದಲ್ಲಿ ಅಕ್ರಮ ಹರಳು ಕಲ್ಲು ಗಣಿಗಾರಿಕೆ ಪ್ರಕರಣ ಬೆಳಕಿಗೆ ಬಂದು ಇಪ್ಪತ್ತು ದಿನಗಳಾದವು. ಮಾಧ್ಯಮದಲ್ಲಿ ವರದಿಯಾದ ಬಳಿಕ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ ಇಲಾಖೆಯ ನಿಯಮದಂತೆ ಕ್ರಮ ಕೈಗೊಂಡು ಈರ್ವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಅವರ ಸ್ಥಾನಕ್ಕೆ ಬೇರೆಯವರನ್ನು ನಿಯೋಜಿಸಿ, ಇನ್ನುಳಿದವರನ್ನು ಬೇರೆಡಗೆ ನಿಯೋಜನೆ ಮಾಡಲಾಗಿದೆ. ಆದರೆ, ಅವರುಗಳ ಸಂಪರ್ಕದಲ್ಲಿರುವ ಪ್ರಮುಖ ಲೂಟಿಕೋರ ಆರೋಪಿಗಳನ್ನು ಮಾತ್ರ ಪತ್ತೆ ಹಚ್ಚಲಾಗಲಿಲ್ಲ. ಇದೀಗ ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಮುಂದಾಗಿರುವ ಬಗ್ಗೆ ತಿಳಿದು ಬಂದಿದೆ.

ಸಾಕ್ಷಿ ಸಂಗ್ರಹಕ್ಕೆ ಕ್ರಮ..!

ಹರಳು ಕಲ್ಲು ದಂಧೆಯಲ್ಲಿ ಭಾಗಿಯಾಗಿರುವ ಆರೋಪಿಗಳು ತಲೆ ಮರೆಸಿಕೊಂಡಿರುವದಾಗಿ ಹೇಳಲಾಗುತ್ತಿದ್ದು, ಈ ಸಂಬAಧ ಆರೋಪಿಗಳನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಸಾಕ್ಷಿಗಳನ್ನು ಕಲೆ ಹಾಕುತ್ತಿದೆ. ಅರಣ್ಯ ಸಂಚಾರಿ ದಳದವರ ಸಹಕಾರದೊಂದಿಗೆ ಈ ಕಾರ್ಯ ನಡೆಸಲಾಗುತ್ತಿದೆ.

ಸಂಚಾರಿ ದಳದ ವರದಿ

ಪ್ರಕರಣಕ್ಕೆ ಸಂಬAಧಿಸಿದAತೆ ನಿಕ್ಷೇಪ ಇರುವ ಸ್ಥಳವನ್ನು ಪತ್ತೆ ಹಚ್ಚಿದ ಅರಣ್ಯ ಸಂಚಾರಿ ದಳದವರು ಈಗಾಗಲೇ ಇಲಾಖೆಗೆ ವರದಿ ಸಲ್ಲಿಸಿದ್ದಾರೆ. ನಿಷೇಧಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯಲು ಕಾರಣ, ಅದನ್ನು ತಡೆಗಟ್ಟುವ ಬಗ್ಗೆ ಮಾರ್ಗೋಪಾಯಗಳು ಹಾಗೂ ಇದೊಂದು ಚಾರಣ ಪ್ರದೇಶವಾಗಿದ್ದು, ಇಲ್ಲಿ ಜನ ಸಂಚಾರವಿದ್ದರೆ ಅಕ್ರಮಗಳು ನಡೆಯಲು ಅವಕಾಶ ದೊರಕುವದಿಲ್ಲ ಎಂಬಿತ್ಯಾದಿ ಮಾಹಿತಿಗಳನ್ನೊಳಗೊಂಡ ವರದಿ ಸಲ್ಲಿಕೆಯಾಗಿರುವ ಬಗ್ಗೆ ತಿಳಿದು ಬಂದಿದೆ. ಇನ್ನೂ ಈ ಪ್ರಕರಣಕ್ಕೆ ಸಂಬAಧಿಸಿದAತೆ ಆದಷ್ಟು ಶೀಘ್ರ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯವೂ ಕೇಳಿಬರುತಿದೆ..!

? ಸಂತೋಷ್, ಸುನಿಲ್