ಗೋಣಿಕೊಪ್ಪಲು, ಜ. ೧೭: ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ನಿರ್ಮಾಣಕ್ಕೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರೆವೇರಿಸಿದರು.
ಸಂಘದ ಅಧ್ಯಕ್ಷ ಅಜ್ಜಮಾಡ ಟಿ. ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಗ್ರಾಮೀಣ ಪ್ರದೇಶದಲ್ಲಿರುವ ರೈತರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುವಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರ ವಹಿಸಿವೆ. ಇದರಿಂದಾಗಿ ಸಂಘದ ಸಾಮಾನ್ಯ ಸದಸ್ಯರಿಗೆ ಸವಲತ್ತುಗಳು ಸಕಾಲದಲ್ಲಿ ಲಭ್ಯವಾಗುತ್ತಿವೆ. ಸರ್ಕಾರದ ವತಿಯಿಂದ ಕಾಲಕಾಲಕ್ಕೆ ಮಂಜೂರಾಗುವ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಶಾಸಕರು ಕರೆ ನೀಡಿದರು.
ಸಂಘದ ಅಧ್ಯಕ್ಷ ಅಜ್ಜಮಾಡ ಟಿ. ಚಂಗಪ್ಪ ಮಾತನಾಡಿ, ಸಂಘದ ಸ್ವಂತ ಜಾಗದಲ್ಲಿ ಉತ್ತಮ ಕಟ್ಟಡ ನಿರ್ಮಾಣಕ್ಕೆ ಆಡಳಿತ ಮಂಡಳಿಯ ಸದಸ್ಯರು ಒಮ್ಮತ ಸೂಚಿಸಿದ್ದಾರೆ. ಮಹಾಸಭೆಯಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗಿದೆ. ರೂ. ೧.೧೬ ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣವಾಗಲಿದ್ದು, ಮುಂದಿನ ೬ ತಿಂಗಳಲ್ಲಿ ಕಟ್ಟಡ ಲೋಕಾರ್ಪಣೆ ಆಗಲಿದೆ. ಸಂಘದ ಸದಸ್ಯರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಗ್ರಾಮದ ಹಿರಿಯರಾದ ಅಜ್ಜಮಾಡ ಕಟ್ಟಿ ಮಂದಯ್ಯ, ಗ್ರಾ.ಪಂ. ಅಧ್ಯಕ್ಷ ಅಜ್ಜಮಾಡ ಜಯ, ಉಪಾಧ್ಯಕ್ಷರಾದ ಕಲ್ಪನ, ಜಾಜಿ ಉತ್ತಪ್ಪ, ಎಂ.ಎA. ಚಂಗಪ್ಪ, ಚೋನಿರ ಸೋಮಯ್ಯ, ವಕೀಲರಾದ ಮಚ್ಚಮಾಡ ಟಿ. ಕಾರ್ಯಪ್ಪ, ಬಿಜೆಪಿ ಪಕ್ಷದ ಜಿಲ್ಲಾ ಪ್ರ. ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ಸೇರಿದಂತೆ ಸಂಘದ ಉಪಾಧ್ಯಕ್ಷ ಐಯ್ಯಮಾಡ ಎ. ಉದಯ, ನಿರ್ದೇಶಕರಾದ ಕೆ.ಎನ್. ಸಂದೀಪ್, ಚೋನಿರ ಜೆ. ಕಾಳಯ್ಯ, ಅಜ್ಜಮಾಡ ಪಿ. ಮೋಹನ್, ಮತ್ರಂಡ ಎಂ. ಮುತ್ತಪ್ಪ, ಚಟ್ಟಂಗಡ ಕೆ. ಗೀತಾ, ಅರೆಯಡ ಟಿ. ಬೊಳ್ಳಮ್ಮ, ಬಿ.ಆರ್. ಪುರುಷೋತ್ತಮ್, ಬಿ.ಆರ್. ಬೇಬಿ, ಕಾಳಿಮಾಡ ಎ. ಪ್ರಕಾಶ್, ಹೆಚ್.ಎಸ್. ಕೇತು, ಐಪುಮಾಡ ಎ. ದೇವಯ್ಯ, ಕಾಳಿಮಾಡ ಕೆ. ಬೆಳ್ಯಪ್ಪ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್.ಬಿ. ಯತಿರಾಜ್, ಮಾಜಿ ಅಧ್ಯಕ್ಷರಾದ ಬಾಚಂಗಡ ಮುದ್ದಪ್ಪ, ಅಜ್ಜಮಾಡ ಕಟ್ಟಿ ಮಂದಯ್ಯ ಸೇರಿದಂತೆ ಸಿಬ್ಬಂದಿಗಳು ಗ್ರಾಮದ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.