*ಗೋಣಿಕೊಪ್ಪ, ಜ. ೧೭: ಕೊಡಗು ಕೊರೊನಾ, ಓಮಿಕ್ರೋನ್ ಆತಂಕದಿAದ ದೂರ ಉಳಿದು ನೆಮ್ಮದಿಯನ್ನು ಕಂಡುಕೊಳ್ಳಲು ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಪೋರ್ಸ್ ಸಕ್ರೀಯವಾಗಿ ಕಾರ್ಯ ನಿರ್ವಹಿಸಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಅವರು ಹೇಳಿದರು.

ಪೊನ್ನಂಪೇಟೆ ತಾ.ಪಂ. ಸಾಮಾರ್ಥ್ಯ ಸೌಧ ಸಭಾಂಗಣದಲ್ಲಿ ಪೊನ್ನಂಪೇಟೆ ತಾಲೂಕು ಗ್ರಾಮ ಪಂಚಾಯಿತಿ ಮಟ್ಟದ ಕೊರೊನಾ, ಓಮಿಕ್ರೋನ್ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಕೊರೊನಾ ಬಾಧೆ ಹೆಚ್ಚಾಗಿದೆ. ಕೊಡಗಿನಲ್ಲಿ ಇದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಗಿ ಕ್ರಮ ಕೈಗೊಂಡಾಗ ಖಾಯಿಲೆಯ ಬಾಧೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಪ್ರತಿಯೊಬ್ಬರು ಜಾಗೃತರಾಗಿ ಕೊರೊನಾ ಹರಡದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಗ್ರಾಮ ವ್ಯಾಪ್ತಿಯಲ್ಲಿರುವ ಹೋಂ ಸ್ಟೇ, ರೆಸಾರ್ಟ್ಗಳ ಮೇಲೆ ಗಮನ ಹರಿಸಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕ್ರಮವನ್ನು ಪಂಚಾಯಿತಿ ಅಧ್ಯಕ್ಷರು ನಿಭಾಯಿಸಬೇಕು. ಅಲ್ಲದೇ ಕಾಲೋನಿ, ಹಾಡಿಗಳಲ್ಲಿ ಮಕ್ಕಳು ಲಸಿಕೆ ಪಡೆದುಕೊಳ್ಳಲು ಮನವೊಲಿಸಲು ಮುಂದಾಗಬೇಕು. ಗ್ರಾಮಗಳಿಗೆ ಹೊರಗಿನಿಂದ ಬರುವವರ ಮೇಲೆ ನಿಗಾ ಇಟ್ಟು ಅಂತವರನ್ನು ಜನಸಂಪರ್ಕಕ್ಕೆ ಬಾರದಂತೆ ತಡೆಯಲು ಟಾಸ್ಕ್ ಫೋರ್ಸ್ ಬಿಗಿ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷಿ÷್ಮ ಅವರು ಮಾತನಾಡಿ ಶಬರಿಮಲೆ ಯಾತ್ರೆ ಮುಗಿಸಿ ಬರುವ ಯಾತ್ರಿಕರನ್ನು ನಿರ್ಧಾಕ್ಷಿಣ್ಯವಾಗಿ ೧೦ ದಿನಗಳ ಕಾಲ ಕ್ವಾರಂಟೈನ್‌ಗೆ ಒಳಪಡಿಸುವ ಕ್ರಮಕ್ಕೆ ಟಾಸ್ಕ್ ಫೋರ್ಸ್ ಮುಂದಾಗಬೇಕು. ಯಾತ್ರಿಕರು ಬಂದ ದಿನವೇ ಕೊರೊನಾ ಕಾಣಿಸಿಕೊಳ್ಳುವುದಿಲ್ಲ. ನಂತರದ ೭-೮ ದಿನದಲ್ಲಿ ಬಾಧೆ ಪ್ರಾರಂಭಿಸುತ್ತದೆ. ಹೀಗಾಗಿ ಈ ನಿಯಮ ಪಾಲಿಸುವುದು ಕಡ್ಡಾಯ ಎಂದು ಸೂಚಿಸಿದರು.

ಪ್ರತಿಯೊಬ್ಬರು ಮಾಸ್ಕ್ ಧರಿಸುವಂತೆ ಮನವೊಲಿಸಿ ಕೊರೊನಾದಿಂದ ನರಳುವುದನ್ನು ತಪ್ಪಿಸಲು ಟಾಸ್ಕ್ ಫೋರ್ಸ್ ಸಕ್ರೀಯವಾಗಿ ಕಾರ್ಯಪ್ರವೃತ್ತ ರಾಗಬೇಕು. ಮಾಸ್ಕ್ ಧರಿಸಲು ಹೇಳಿದಾಗ ಉಡಾಫೆ ಉತ್ತರ ನೀಡಿದರೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳಲು ಸಹ ಹಿಂಜರಿಯಬಾರದೆAದು ತಿಳಿಸಿದರು.

ತಾಲೂಕು ತಹಶೀಲ್ದಾರ್ ಶ್ರೀಕಾಂತ್, ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ತಾಲೂಕು ಉಪ ಪೊಲೀಸ್ ಅಧಿಕಾರಿ ಜಯಕುಮಾರ್ ಹಾಗೂ ಪಂಚಾಯಿತಿ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಹಾಜರಿದ್ದರು.