ಕಣಿವೆ, ಜ. ೧೭: ಕುಶಾಲನಗರದ ಸೋಮೇಶ್ವರ ದೇವಾಲಯದ ಮಗ್ಗುಲಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಉಬ್ಬು ಒಂದಿದ್ದು, ವಾಹನ ಸವಾರರು ಇದನ್ನರಿಯದೇ ವೇಗವಾಗಿ ವಾಹನಗಳನ್ನು ಚಾಲಿಸುತ್ತಿದ್ದುದರಿಂದ ಸವಾರರು ಅವಘಡಗಳಿಗೆ ತುತ್ತಾಗುತ್ತಿದ್ದರು. ಅಲ್ಲದೇ ವಾಹನಗಳು ಕೂಡ ದುರಸ್ಥಿಗೀಡಾಗುತ್ತಿದ್ದವು.
ಇದನ್ನು ಮನಗಂಡ ಸ್ಥಳೀಯ ಚಂದ್ರಶ್ರೀ ಬಣ್ಣದ ಅಂಗಡಿ ಮಾಲೀಕ ಬಿ.ಎನ್. ಶ್ರೀಧರ್ ಹಾಗೂ ಬೈಚನಹಳ್ಳಿಯ ವರದರಾಜು ಎಂಬವರ ಸಹಕಾರದಿಂದ ರಸ್ತೆಯಲ್ಲಿನ ಉಬ್ಬುಗೆ ಬಿಳಿಯ ಆಯಿಲ್ ಬಣ್ಣವನ್ನು ಬಳಿಯುವ ಮೂಲಕ ವಾಹನ ಸವಾರರಿಗೆ ನೆರವಾಗಿದ್ದಾರೆ.