ಶನಿವಾರಸAಜೆ, ಜ. ೧೬: ನಗರದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿಗಳು ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸುಮಾರು ೨೫ ದ್ವಿಚಕ್ರ ವಾಹನಗಳನ್ನು ತಪಾಸಣೆ ನಡೆಸಿದರು. ಈ ಪೈಕಿ ಹೆಲ್ಮೆಟ್, ಮಾಸ್ಕ್ ಧರಿಸದೆ ಹಾಗೂ ಸರಿಯಾದ ದಾಖಲಾತಿಗಳನ್ನು ಇಟ್ಟುಕೊಳ್ಳದ ೧೮ ದ್ವಿಚಕ್ರ ವಾಹನ ಸವಾರರಿಗೆ ರೂ. ೧೩ ಸಾವಿರ ಸ್ಥಳದಲ್ಲೇ ದಂಡ ವಿಧಿಸಿದ್ದಾರೆ.

ಈ ಸಂದರ್ಭ ಪೊಲೀಸ್ ಸಿಬ್ಬಂದಿಗಳಾದ ಮಹೇಶ್ ಕುಮಾರ್, ರಮೇಶ್, ಧನಂಜಯ, ವಿಶ್ವನಾಥ, ಇತರರು ಭಾಗಿಗಳಾಗಿದ್ದರು.