ಮಡಿಕೇರಿ, ಜ. ೧೬: ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರು ಅನಗತ್ಯವಾಗಿ ಓಡಾಡುವ ಹಾಗೂ ಮಾಸ್ಕ್ ಧರಿಸದವರ ವಿರುದ್ಧ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವಾಹನ ತಪಾಸಣೆ ಕೈಗೊಂಡ ಪೊಲೀಸರು ಮಾಸ್ಕ್ ಧರಿಸದೆ ಓಡಾಡುವವರು ಹಾಗೂ ಅನಗತ್ಯ ಬರುವ ವಾಹನಗಳನ್ನು ತಡೆದು ದಂಡ ವಿಧಿಸಿದರು. ಜಿಲ್ಲೆಗೆ ಪ್ರವಾಸಕ್ಕೆ ಬಂದವರು ಅನಗತ್ಯವಾಗಿ ಸಂಚರಿಸುವುದು ಕಂಡುಬAತು.
ಕಾರು ಚಾಲಕ ಹಾಗೂ ಪೊಲೀಸ್ ಮಧ್ಯೆ ದಂಡ ವಿಚಾರದಲ್ಲಿ ವಾಗ್ವಾದ ನಡೆಯಿತು. ಕಾರಿನಲ್ಲಿ ಒಬ್ಬನೆ ಪ್ರಯಾಣಿಸಿದರು ಮಾಸ್ಕ್ ಧರಿಸಬೇಕಾ? ಎಂದು ಪೊಲೀಸರಿಗೆ ಚಾಲಕ ಪ್ರಶ್ನಿಸಿದ. ಇದು ವಾಗ್ವಾದಕ್ಕೆ ಕಾರಣವಾಯಿತು.