ಮಡಿಕೇರಿ, ಜ. ೧೪: ಪತ್ರಕರ್ತ ಎಂ.ಇ. ಮಹಮ್ಮದ್ ಅವರು ಮಲಯಾಳ ದಿಂದ ಕೊಡವ ಭಾಷೆಗೆ ಅನುವಾದಿ ಸಿರುವ ‘ಕರ್ತ ಪೊನ್ನ್’ ಎಂಬ ಕಾದಂಬರಿ ಜನ ಮನ್ನಣೆ ಪಡೆದ ಹಿನ್ನೆಲೆಯಲ್ಲಿ ಮಹಮ್ಮದ್ ಅವರ ಪ್ರತಿಭೆ ಯನ್ನು ಮೆಚ್ಚಿ ಈ ಕತೆ ಕೇಳುಗರ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಡಿಕೇರಿಯ ವಕೀಲ ಬಾಳೆಯಡ ಕಿಶನ್ ಪೂವಯ್ಯ ಅವರ ನಿವಾಸದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಿಶನ್ ಪೂವಯ್ಯ ಅವರ ತಂದೆ, ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಬಾಳೆಯಡ ಚರ್ಮಣ್ಣ ಅವರು ಮಹಮದ್ ಅವರನ್ನು ಸನ್ಮಾನಿಸುವ ಮೂಲಕ ಕತೆಯ ಅಭಿಮಾನಿಗಳು ನೀಡಿದ ಕಾಣಿಕೆಯನ್ನು ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ವಕೀಲರುಗಳಾದ ಕಿಶನ್ ಪೂವಯ್ಯ, ರಾಯ್ ಮುಂತಾದವರು ಉಪಸ್ಥಿತರಿದ್ದರು.

ಮಹಮ್ಮದ್ ಅವರು ಕರ್ತಪೊನ್ನ್ ಎಂಬ ಕತೆಯನ್ನು ಕಳೆದ ಕೆಲವು ತಿಂಗಳಿAದ ತಮ್ಮದೇ ಧ್ವನಿಯಲ್ಲಿ ವಾಟ್ಸಪ್ ಮೂಲಕ ಧಾರಾವಾಹಿಯ ರೂಪದಲ್ಲಿ ನೂರಾರು ಕೊಡವ ಭಾಷಾಭಿಮಾನಿಗಳಿಗೆ ಕಳುಹಿಸಿ ಕೊಡುತ್ತಿದ್ದು, ಈ ಕತೆ ಕೇಳುಗರಲ್ಲಿ ಪ್ರತಿ ವಾರವೂ ಕುತೂಹಲ ಕೆರಳಿಸಿತ್ತು.