ಗೋಣಿಕೊಪ್ಪಲು, ಜ.೧೪: ಪ್ರತಿಷ್ಠಿತ ಸಹಕಾರ ಸಂಘಗಳಲ್ಲೊAದಾದ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾಫಿ ಬೀಜ ಮಾರಾಟದಲ್ಲಿ ಅಕ್ರಮ ನಡೆದಿದೆ ಎನ್ನಲಾಗಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಇದೀಗ ೮೫ ಚೀಲ ಕಾಫಿ ಬೀಜಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣಕ್ಕೆ ಸಂಬAಧಿಸಿದAತೆ ವಶಪಡಿಸಿಕೊಂಡ ಕಾಫಿ ಬೀಜದ ಚೀಲವನ್ನು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಕಾನೂರು ಕೃಷಿ ಪತ್ತಿನ ಸಹಕಾರ ಸಂಘವು ೫೦ ಎಕರೆ ಸರ್ಕಾರಿ ಜಾಗವನ್ನು ೧೦ ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆದು ಇದರಲ್ಲಿ ಕಾಫಿ ಬೆಳೆಯಲಾಗುತ್ತಿತ್ತು.

ಇದರಲ್ಲಿ ಬಂದ ಕಾಫಿಯನ್ನು ಮಾರಾಟ ಮಾಡುವ ಸಂದರ್ಭ ಸಂಘದ ಅಧ್ಯಕ್ಷ ಎ.ಎ.ವಿವೇಕ್ ಅವರು ಸಂಘದ ನಿಯಮ ಪಾಲಿಸದೇ ಮಾರಾಟ ಮಾಡಿದ್ದಾರೆ ಇದರಿಂದ ಸಂಘಕ್ಕೆ ಲಕ್ಷಾಂತರ ಹಣ ನಷ್ಟವಾಗಿದೆ ಎಂದು ಆರೋಪಿಸಿ, ಸಂಘದ ಸದಸ್ಯ ಎಸ್.ಎಂ.ಧನAಜಯ ದೂರು ನೀಡಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಲಯವು ನಿಯಮಬಾಹಿರವಾಗಿ ಮಾರಾಟ ಮಾಡಿರುವ ಕಾಫಿಯನ್ನು ವಶಕ್ಕೆ ಪಡೆದು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಅಲ್ಲದೆ ಇದರ ತನಿಖೆ ಯನ್ನು ವೀರಾಜಪೇಟೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್ ಅವರಿಗೆ ವಹಿಸಲಾಗಿತ್ತು.

ನ್ಯಾಯಾಲಯದ ಆದೇಶದ ಮೇರೆಗೆ ಈ ಬಗ್ಗೆ ಜವಾಬ್ದಾರಿ ವಹಿಸಿಕೊಂಡ ಶ್ರೀಧರ್ ಕಾನೂರಿನ ಕೃಷಿ ಪತ್ತಿನ ಸಹಕಾರ ಸಂಘವು ಸಮೀಪದ ಬಾಳೆಲೆ ಕಾಫಿ ಕ್ಯೂರಿಂಗ್ ನಲ್ಲಿ ಮಾರಾಟ ಮಾಡಿದ್ದ ಅಂದಾಜು ಮೂರು ಲಕ್ಷ ಮೌಲ್ಯದ ೮೫ ಚೀಲ ಕಾಫಿಯನ್ನು ಲಾರಿ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ. ಲಾರಿಯು ಬ್ಯಾಂಕ್ ನ ಅಧ್ಯಕ್ಷರಿಗೆ ಸೇರಿದ್ದು ಎನ್ನಲಾಗಿದ್ದು, ಲಾರಿಯನ್ನು ಜಪ್ತಿ ಮಾಡಲಾಗಿದೆ.

ಸಹಕಾರ ಸಂಘವು ಭೋಗ್ಯದ ಅವಧಿಯನ್ನು ವಿಸ್ತರಿಸುವ ಸಲುವಾಗಿ ಸಂಘದ ಖಾತೆಯಿಂದ ವಿವಿಧ ಹಂತದಲ್ಲಿ ೨೫ ಲಕ್ಷ ಡ್ರಾ ಮಾಡುವ ಮೂಲಕ ಸಂಘದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ವಿಷಯದಲ್ಲಿ ಸದಸ್ಯ ಧನಂಜಯ ಡಿ.ಆರ್. ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಅಧಿಕಾರಿಗಳು ಸಂಘದಿAದ ನಿಯಮ ಬಾಹಿರವಾಗಿ ಡ್ರಾ ಮಾಡಲಾದ ೨೫ ಲಕ್ಷ ಹಣವನ್ನು ಮತ್ತೆ ಸಂಘದ ಖಾತೆಗೆ ಜಮಾ ಮಾಡುವಂತೆ ಆದೇಶ ನೀಡಿದ್ದರು.

-ಹೆಚ್.ಕೆ.ಜಗದೀಶ್